Monday, January 27, 2025

ಯುವತಿಯ ಕೆನ್ನೆಗೆ ಬಡಿದ ಚೆಂಡು: ಅಭಿಮಾನಿಯ ಕಣ್ಣೀರು ನೋಡಿ ಮರುಗಿದ ಸಂಜು ಸ್ಯಾಮ್ಸನ್

ಜೋಹನ್ಸ್​​ಬರ್ಗ್​ : ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4ನೇ ಪಂದ್ಯದ ಸಂಜು ಸ್ಯಾಮ್ಸನ್​​ ಸಿಡಿಸಿದ ಸಿಕ್ಸ್​ರ್​  ಯುವತಿಯೋರ್ವಳ ಕೆನ್ನಗೆ ಬಡಿದು ಗಾಯವಾಗಿದ್ದು. ಆಕಸ್ಮಿಕವಾಗಿ ಘಟಿಸಿದ ಘಟನೆಗೆ ಸಂಜು ಸ್ಯಾಮ್ಸನ್​​ ಕ್ಷಮೆಯಾಚಿಸಿದ್ದಾರೆ.

ಭಾರತೀಯ ಇನ್ನಿಂಗ್ಸ್‌ನ ವೇಳೆ, ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹೊಡೆದ ಸಿಕ್ಸರ್‌ನಿಂದ ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆಫ್ರಿಕಾದ ಬೌಲರ್‌ಗಳನ್ನು ಸದೆಬಡಿಯಿತು. ಭಾರತೀಯ ಇನ್ನಿಂಗ್ಸ್‌ನ ವೇಳೆ, ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಹೊಡೆದ ಸಿಕ್ಸರ್‌ನಿಂದ ಕ್ರೀಡಾಂಗಣದಲ್ಲಿದ್ದ ಮಹಿಳಾ ಅಭಿಮಾನಿಯೊಬ್ಬರು ಗಂಭೀರವಾಗಿ ಗಾಯಗೊಂಡರು.

ಭಾರತೀಯ ಇನ್ನಿಂಗ್ಸ್‌ನ 10ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ ಟ್ರಿಸ್ಟಾನ್ ಸ್ಟಬ್ಸ್ ವಿರುದ್ಧ ಸತತ ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಆದರೆ, ಈ ವೇಳೆ ಎರಡನೇ ಸಿಕ್ಸರ್ ಸೆಕ್ಯುರಿಟಿ ಗಾರ್ಡ್ ದೇಹಕ್ಕೆ ಬಡಿದು ಮಹಿಳಾ ಅಭಿಮಾನಿಯ ಮುಖಕ್ಕೆ ಬಡಿದಿದ್ದು ತೀವ್ರ ನೋವು ತಂದಿದೆ. ಬಳಿಕ ಆಕೆ ನೋವಿನಿಂದ ಅಳುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆಕೆಯ ನೋವನ್ನು ಕಂಡು ಮರುಗಿದ ಸ್ಯಾಮ್ಸನ್ ಕ್ಷಮೆಯನ್ನೂ ಕೇಳಿದ್ದಾರೆ.

RELATED ARTICLES

Related Articles

TRENDING ARTICLES