Wednesday, January 22, 2025

ತಹಶೀಲ್ದಾರ್​ ಕಚೇರಿಯಲ್ಲಿ ನೌಕರ ಆತ್ಮಹತ್ಯೆ ಪ್ರಕರಣ: ಕರ್ತವ್ಯಕ್ಕೆ ಹಾಜರಾದ ತಹಶೀಲ್ದಾರ್​

ಬೆಳಗಾವಿ :ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣ ಸಂಬಂಧ ಎ1 ಆರೋಪಿ ತಹಶಿಲ್ದಾರ ಬಸವರಾಜ ನಾಗರಾಳ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನಿರೀಕ್ಷಣಾ ಜಾಮೀನು ಮಂಜೂರಾಗುತ್ತಿದ್ದಂತೆ ತಹಶಿಲ್ದಾರ ಕಚೇರಿಗೆ ಆಗಮಿಸಿದ್ದಾರೆ.

ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದ ಕಚೇರಿಯಲ್ಲೇ ಕರ್ತವ್ಯ ನಿರ್ವಹಣೆ‌ ಮಾಡುತ್ತಿದ್ದು.ಹತ್ತು ದಿನದಿಂದ ನಾಪತ್ತೆಯಾಗಿದ್ದ ತಹಶಿಲ್ದಾರ ಬಸವರಾಜ ಇಂದು ದಿಢೀರ್ ಪ್ರತ್ಯಕ್ಷರಾಗಿದ್ದಾರೆ, ಈವರೆಗೂ ಬೀಗ ಹಾಕಿದ ಕಚೇರಿ ಇಂದು ಓಪನ್ ಆಗಿದ್ದು ತಹಶಿಲ್ದಾರ ಎಂದಿನಂತೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಮಾಧ್ಯಮದರನ್ನ  ನೋಡ್ತಿದ್ದಂತೆ ತಹಶಿಲ್ದಾರ ಕಚೇರಿಯಿಂದ ಹೊರ ಹೋಗಿದ್ದಾರೆ.

ಪ್ರಕರಣದ ಹಿನ್ನಲೆ 

ನ.5ರಂದು ಎಸ್​ಡಿಎ ನೌಕರ ರುದ್ರೇಶ ತಹಶಿಲ್ದಾರ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಾಟ್ಸಪ್​ನಲ್ಲಿ ತಮ್ಮ ಸಾವಿಗೆ ಕಾರಣ ತಹಶಿಲ್ದಾರ ಬಸವರಾಜ ನಾಗರಾಳ, ಹೆಬ್ಬಾಳ್ಕರ್ ಪಿಎ ಸೋಮು, ಎಫ್‌ಡಿಎ ಅಶೋಕ ಕಬ್ಬಲಿಗೇರ್ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ಧರು.  ಇದರ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES

Related Articles

TRENDING ARTICLES