Sunday, December 22, 2024

ತಮಿಳರ ಬಗ್ಗೆ ಅವಹೇಳನಕಾರಿ ಹೇಳಿಕೆ :ನಟಿ ಕಸ್ತೂರಿ ಶಂಕರ್ ಶೀಘ್ರ ಬಂಧನ ಸಾಧ್ಯತೆ

ತೆಲುಗು ಜನರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ವಿವಾದಕ್ಕೀ ಡಾಗಿರುವ ಬಹುಭಾಷಾ ನಟಿ ಕಸ್ತೂರಿ ಶಂಕರ್ ಶೀಘ್ರದಲ್ಲಿ ಬಂಧನವಾಗುವ ಸಾಧ್ಯತೆಯಿದೆ. ನಟಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ನಿರಾಕರಿಸಿದೆ.

ಇತ್ತೀಚೆಗೆ ನಟಿ ಕಸ್ತೂರಿ ಶಂಕರ್ ಚೆನ್ನೈನಲ್ಲಿ ನಡೆದ ಕಾರ್ಯಕ್ರವೊಂದರಲ್ಲಿ ತಮಿಳುನಾಡಿನಲ್ಲಿ ಬ್ರಾಹ್ಮಣರಿಗೆ ಕಿರುಕುಳ ನೀಡಲಾಗುತ್ತಿದೆ ಎಂದಿದ್ದರು. ಇದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.300 ವರ್ಷಗಳ ಹಿಂದೆ ತಮಿಳುನಾಡಿಗೆ ರಾಜರುಗಳ ಸಂಗಾತಿಗೆ ಸೇವಕರಾಗಿ ತೆಲುಗು ಜನರು ವಲಸೆ ಬಂದಿದ್ದರು. ಇದೇ ಜನ ತಮ್ಮನ್ನು ತಾವು ತಮಿಳರೆಂದು ಹೇಳಿಕೊಳ್ಳುತ್ತಿದ್ದಾರೆ. ಸ್ಥಳೀಯ ಬ್ರಾಹ್ಮಣರನ್ನು ತಮಿಳಿರಲ್ಲ ಎನ್ನುತ್ತಿದ್ದಾರೆ ಎಂದು ನಟಿ ಆರೋಪಿಸಿದ್ದರು. ಸರ್ಕಾರಿ ನೌಕರರಲ್ಲಿ ಬ್ರಾಹ್ಮಣೇತರರು ಲಂಚ ಪಡೆಯುತ್ತಿದ್ದಾರೆ ಎನ್ನುವ ಆರೋಪವನ್ನು ಇದೇ ಸಂದರ್ಭದಲ್ಲಿ ಮಾಡಿದ್ದರು. ಇದಕ್ಕೆ ಸರ್ಕಾರಿ ನೌಕರರ ಸಂಘದವರು ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರು ದಾಖಲಿಸಲಾಗಿತ್ತು.ನಾಯ್ಡು ಮಹಾಜನ ಸಂಗಮ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರು ನಟಿಯ ವಿರುದ್ದಧ ಎಫ್ಐಆರ್ ದಾಖಲಿಸಿದ್ದರು.

ತೆಲುಗು ಜನರ ಬಗ್ಗೆ ಆಡಿದ ಮಾತಿನಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಸ್ತೂರಿ ಶಂಕರ್ ಆಡಳಿತರೂಢ ಡಿಎಂಕೆ ತನ್ನ ವಿರುದ್ಧ ಪಿತೂರಿ ನಡೆಸುತ್ತಿದೆ. ನನ್ನ ಹೇಳಿಕೆಯನ್ನು ಉದ್ದೇಶ ಪೂರ್ವಕವಾಗಿ ತಿರುಚಲಾಗಿದೆ. ನಾನು ತೆಲುಗು ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಯಾರನ್ನೂ ನೋಯಿಸುವ ಉದ್ದೇಶ ನನ್ನದಲ್ಲವೆಂದು ಕ್ಷಮೆಯಾಚಿಸಿದ್ದರು.ಇತ್ತ ಪೊಲೀಸರು ದೂರು ದಾಖಲಿಸಿಕೊಂಡು ನಟಿಗೆ ಸಮನ್ಸ್ ನೀಡಲು ಅವರ ನಿವಾಸದತ್ತ ತೆರಳಿದ್ದರು. ಈ ವೇಳೆ ಕಸ್ತೂರಿ ಮನೆಗೆ ಬೀಗ ಹಾಕಲಾಗಿತ್ತು. ಇದಲ್ಲದೆ ಅವರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು.

ಈ ಎಲ್ಲದರ ನಡುವೆ ಮುದ್ರಾಸ್ ಹೈಕೋರ್ಟ್‌ಗೆ ನಟಿ ಕಸ್ತೂರಿ ಶಂಕರ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿವಾದಕ್ಕೆಕ್ಷಮೆಯಾಚಿಸಿದ ಬಳಿಕವೂ ನನ್ನ ಮೇಲೆ ದೂರು ದಾಖಲಿಸಿದ್ದಾರೆ ಎಂದು ಅರ್ಜಿಯಲ್ಲಿ ನಟಿ ಹೇಳಿದ್ದರು. ಆದರೆ ಕೋರ್ಟ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ತಮ್ಮ ಲಾಭಕ್ಕಾಗಿ ತಮಿಳು – ತೆಲುಗು ಮಂದಿಯ ನಡುವೆ ಸಂಘರ್ಷವಾಗುವ ರೀತಿ ಮಾತನಾಡುವುದು ಸಮಂಜಸವಲ್ಲವೆಂದು ಕೋರ್ಟ್‌ ಹೇಳಿದೆ. ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ಪೀಠವು ನಟಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಕಸ್ತೂರಿ ಶಂಕರ್ ಅವರನ್ನು ಪೊಲೀಸರು ಶೀಘ್ರದಲ್ಲಿ ಬಂಧಿಸುವ ಸಾಧ್ಯತೆಯಿದೆ.

RELATED ARTICLES

Related Articles

TRENDING ARTICLES