Thursday, December 26, 2024

ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡದಲ್ಲಿ ಕುರಾನ್ ಬಿಡುಗಡೆ

ಅನೇಕಲ್​: ಹಿಂದೂಗಳಿಗೆ ಭಗವದ್ಗೀತೆ ಹಾಗೆ ಮುಸ್ಲಿಮರಿಗೆ ಕುರಾನ್ ಪವಿತ್ರ ಗ್ರಂಥವಾಗಿದೆ ಕುರಾನ್ ಬಗ್ಗೆ ಇರುವ ಎಷ್ಟೊ ಊಹಾಪೋಹಗಳಿಗೆ ತೆರೆ ಎಳೆಯಲು ಇಲ್ಲಿ ಒಬ್ಬರು ಧರ್ಮಗುರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕರ್ನಾಟಕ ಜನತೆಗೆ ಕನ್ನಡದ ಕುರಾನ್ ಅನ್ನು ರಾಜ್ಯೋತ್ಸವ ಉಡುಗೊರೆಯಾಗಿ ಕನ್ನಡದ ಪ್ರಮುಖ ಸಾಹಿತಿಗೆ ಹಸ್ತಾಂತರ ಮಾಡುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಿದ್ದಾರೆ ಇಷ್ಟಕ್ಕೂ ಯಾರು ಆ ವ್ಯಕ್ತಿ ಈ ಸ್ಟೋರಿ ನೋಡಿ..

ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ಈಗಾಗಲೇ ಅನೇಕ ಭಾಷೆಗಳಲ್ಲಿ ಅನುವಾದವಾಗಿ ಎಲ್ಲೆಡೆ ಬಳಕೆ ಮಾಡಲಾಗುತ್ತಿದೆ ಕನ್ನಡದಲ್ಲೂ ಸಹ ಕುರಾನ್ ಭಾಷೆ ಅನುವಾದವಾಗಿದ್ದು ಬಹಳ ಸೀಮಿತ ಮಂದಿಯ ಬಳಿ ಮಾತ್ರ ಈ ಕುರಾನ್ ಲಭ್ಯವಿದೆ ಹಾಗಾಗಿ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಬಶೀರ್ ಅಹ್ಮದ್ ಊರು ವಜೀರ್ ಹಜರತ್ ಎಂಬ ಮುಸ್ಲಿಂ ಧರ್ಮ ಗುರು ಇದೀಗ ಕನ್ನಡಕ್ಕೆ ಕುರಾನ್ ನನ್ನು ಅನುವಾದಿಸಿ ಎಲ್ಲರಿಗೂ ದೊರೆಯಬೇಕು ಎಂಬುವ ಉದ್ದೇಶದಿಂದ ಕನ್ನಡ ಪರ ಸಂಘಟನೆಯಾದ ವಾಟಾಳ್ ನಾಗರಾಜ್ ಅಭಿಮಾನಿಗಳ ಬಳಗದ ವೇದಿಕೆ ಮೂಲಕ ಎಲ್ಲರಿಗೂ ದೊರೆಯುವಂತೆ ಲೋಕಾರ್ಪಣೆ ಮಾಡಿದ್ದಾರೆ ಆನೇಕಲ್ ನ ಸಾಹಿತಿ ಜಗನ್ನಾಥ ರಾವ್ ಬಹಳೆ ಅವರಿಗೆ ಕನ್ನಡದ ಕುರಾನ್ ಗ್ರಂಥವನ್ನು ನೀಡಿ ಕುರಾನ್ ನ ಬಗ್ಗೆ ಇರುವ ಅನೇಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅದರಲ್ಲೂ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಿಗರಿಗೆ ಕುರಾನ್ ಗ್ರಂಥವನ್ನು ಕನ್ನಡದಲ್ಲಿ ನೀಡಿ ಕನ್ನಡ ರಾಜ್ಯೋತ್ಸವ ಕ್ಕೆ ಉಡುಗೊರೆ ನೀಡಿದ್ದಾರೆ ಅಲ್ಲದೆ ಕುರಾನ್ ಗ್ರಂಥ ಯಾವುದೇ ರೀತಿಯ ಕೆಟ್ಟದ್ದನ್ನು ಬೆಂಬಲಿಸುವುದಿಲ್ಲ ಇದರಲ್ಲಿರುವ ಅರ್ಥ ಎಲ್ಲರಿಗೂ ತಿಳಿಯಲಿ ಎಂಬುದೇ ನಮ್ಮ ಉದ್ದೇಶ ಎಂದು ಬಶೀರ್ ಅಹಮದ್ ತಿಳಿಸಿದ್ದಾರೆ

ಇನ್ನು ಹಲವೆಡೆ ಕುರಾನ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಹಾಗೂ ಊಹಾಪೋಹಗಳು ಇದೆ ಎಂದು ಚರ್ಚಿಸಲಾಗುತ್ತಿದೆ ಹಾಗಾಗಿ ಕುರಾನ್ ನಲ್ಲಿ ಏನಿದೆ ಎಂಬುದರ ಬಗ್ಗೆ ಅನೇಕ ಮಂದಿಗೆ ವಾಸ್ತವ ಸ್ಥಿತಿ ತಿಳಿಯಬೇಕಿದೆ ಹಾಗಾಗಿ ಕರ್ನಾಟಕದಲ್ಲಿ ಇರುವ ಜನತೆಗೆ ಕುರಾನ್ ಕನ್ನಡದಲ್ಲಿ ಲಭ್ಯವಾದರೆ ಕುರಾನ್ ನಲ್ಲಿ ಏನೆಲ್ಲಾ ಇದೆ ಎಂಬುದರ ಬಗ್ಗೆ ತಿಳಿಯುತ್ತದೆ ಇದೇ ಉದ್ದೇಶದಿಂದ ಅಹಮದ್ ಅವರು ಖ್ಯಾತ ಸಾಹಿತಿ ಜಗನ್ನಾಥ ರಾವ್ ಬಹುಳೆ ಅವರಿಗೆ ಕನ್ನಡದ ಕುರಾನ್ ಅನ್ನು ತಾವೇ ಸ್ವತಃ ಅನುವಾದಿಸಿ ಹಸ್ತಾಂತರ ಮಾಡಿದ್ದಾರೆ ಇನ್ನು ಕುರಾನ್ ನಲ್ಲಿ ಯಾವುದೇ ರೀತಿಯ ಕೆಟ್ಟದ್ದು ಇಲ್ಲ ಎಂದು ಎಲ್ಲರಿಗೂ ತಿಳಿಯುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡದಲ್ಲಿ ಬಿಡುಗಡೆ ಮಾಡಲಾಗಿದೆ ಅಲ್ಲದೆ ಅಹಮದ್ ಬಶೀರ್ ಅವರಿಗೆ ಕನ್ನಡದ ಮೇಲೆ ಅಪಾರ ಅಭಿಮಾನವಿತ್ತು ಕನ್ನಡಿಗರಿಗೆ ರಾಜ್ಯೋತ್ಸವದ ಪ್ರಯುಕ್ತ ಈ ಒಂದು ಉಡುಗೊರೆಯನ್ನು ನೀಡಿದ್ದಾರೆ ಎಂದು ವಾಟಾಳ್ ಅಭಿಮಾನಿಗಳ ಬಳಗದ ವತಿಯಿಂದ ನವೆಂಬರ್ ಒಂದರಂದು ಬಶೀರ್ ಅಹ್ಮದ್ ಅವರಿಗೆ ಸನ್ಮಾನವನ್ನು ಕೂಡ ಮಾಡಲಾಗಿದೆ.

ಒಟ್ನಲ್ಲಿ ಧರ್ಮ ಭಾಷೆ ಜಾತಿ ಹೇಗೆ ಅನೇಕ ವಿಚಾರಗಳಲ್ಲಿ ವಾಗ್ವಾದಗಳನ್ನು ನಡೆಸಿ ಅನೇಕರು ಹೊಡೆದಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಒಬ್ಬ ಮುಸ್ಲಿಂ ಧರ್ಮಗುರು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದ ಕುರಾನ್ ಅನ್ನು ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿರುವುದು ನಿಜಕ್ಕೂ ಶ್ಲಾಘನೀಯ ವಿಷಯವಾಗಿದೆ …

RELATED ARTICLES

Related Articles

TRENDING ARTICLES