Monday, December 23, 2024

ದೀಪಾವಳಿಗೆ ಗುಡ್​ನ್ಯೂಸ್​ ಕೊಟ್ಟ ಸಿಂಹಪ್ರಿಯಾ

ಬೆಂಗಳೂರು :  ಕನ್ನಡ ಸಿನಿಲೋಕದ ವಿವಾಹಿತ ಜೋಡಿ ಹರಿಪ್ರಿಯಾ ತಮ್ಮ ಅಭಿಮಾನಿ ವರ್ಗಕ್ಕೆ ಸಂತಸದ ವಿಷಯವನ್ನು ನೀಡಿದ್ದು. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

26 ಜನವರಿ 2024ರಂದು ಕನ್ನಡದ ಖ್ಯಾತ ನಟ ವಸಿಷ್ಟ ಸಿಂಹರೊಂದಿಗೆ ಹಸಮಣೆಯೇರಿದ್ದ ನಟಿ ಹರಿಪ್ರಿಯಾ ಆಗಾಗ ಕೆಲವು ಖಾಸಗಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದನ್ನು ಹೊರತು ಪಡಿಸಿ ಅವರ ಬಗ್ಗೆ ಹೆಚ್ಚು ಸುದ್ದಿಗಳು ಹೊರೆಗೆ ಬರುತ್ತಿರಲಿಲ್ಲ. ಇದೀಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿಂಹಪ್ರಿಯಾ ತಾವು ಗರ್ಭಿಣಿಯಾಗುತ್ತಿರುವ ವಿಷಯವನ್ನು ತಿಳಿಸಿದ್ದಾರೆ.

ಮಾಲ್ಡೀವ್ಸ್ನಲ್ಲಿ ಎಂಜಾಯ್ ಮೂಡ್ ನಲ್ಲಿರೋ ವಸಿಷ್ಟ ಸಿಂಹ -ಹರಿಪ್ರಿಯಾ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿ, ಅದರ ಜೊತೆಗೆ ತಾಯಿಯಾಗುತ್ತಿರುವ ವಿಷಯವನ್ನು ತಿಳಿಸಿ, ಎಲ್ಲರು ನಮಗೆ ಆರ್ಶೀವಾದ ಮಾಡಿ ಎಂದು ಕೇಳಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES