ಕೊಪ್ಪಳ : ತುಂಗಭದ್ರೆಯನ್ನು ಕಾಪಾಡಿದ ಕನ್ನಯ್ಯ ನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಋಣ ತೀರಿಸಿದ ಕರ್ನಾಟಕ ಸರ್ಕಾರ. ಕನ್ನಯ್ಯ ನಾಯ್ಡುಗೆ ಹೊರದೇಶ, ಹೊರನಾಡು ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿಹೋದ ಸಂಧರ್ಭದಲ್ಲಿ ಆತಂಕದಲ್ಲಿ ಇದ್ದ ಸರ್ಕಾರ ಮತ್ತು ರೈತರ ಪಾಲಿಗೆ ಆಪತ್ಪಾಂದವನಾಗಿ ಬಂದಿದ ನಾಯ್ಡು. ಜಲಾಶಯಕ್ಕೆ ಕ್ರಸ್ಟ್ ಗೇಟ್ ಬದಲಿಗೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿ ಯಶಸ್ವಿಯಾಗಿದ್ದರು. ಇದರಿಂದಾಗಿ ಅವರು ಕಲ್ಯಾಣ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂದ್ರಪ್ರದೇಶದ ರೈತರಿಗೆ ಅಧುನಿಕ ಭಗೀರಥನಾಗಿದ್ದರು.
ಇದೀಗ ಕರ್ನಾಟಕ ಸರ್ಕಾರ ಕನ್ನಯ್ಯನಾಯ್ಡುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ ನೀಡಿದ್ದು.
ಕನ್ನಯ್ಯನಾಯ್ಡುಗೆ ಪ್ರಶಸ್ತಿ ಘೋಷಣೆಗೆ ಸಚಿವ ಶಿವರಾಜ್ ತಂಗಡಗಿಗೆ ರೈತರು ಅಭಿನಂದನೆ ಸಲ್ಲಿಸಿದರು .