ವಿಜಯಪುರ : ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ವಕ್ಫ್ ಬೋರ್ಡ್ಗಳು ರೈತರ ಜಮೀನು ಸೇರಿದಂತೆ ಕೆಲ ಮಠಗಳ ಆಸ್ತಿಯನ್ನು ವಷಪಡಿಸಿಕೊಂಡಿದೆ ಎಂಬ ಮಾಹಿತಿ ದೊರಕುತಿದ್ದು. ಇದೀಗ ವಿಜಯಪುರದ ಸಿದ್ದ ಶಂಕರಲಿಂಗ ಮಠದ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಳಾಗಿದೆ ಎಂಬ ಮಾಹಿತಿ ದೊರಕುತ್ತಿದೆ.
ವಿಜಯಪುರದ ಸಿಂದಗಿ ತಾಲೂಕಿನ ಯರಗಲ್ ಬಿಕೆ ಗ್ರಾಮದ ಸಿದ್ಧ ಶಂಕರಾನಂದ ಮಠದ ಆಸ್ತಿ ವಕ್ಫ್ನ ವಶಕ್ಕೆ ಸೇರಿದ್ದು. ಮಠದ 8.16 ಏಕರೆ ಜಮೀನು ವಕ್ಫ್ ಬೋರ್ಡ್ನ ಪಾಲಾಗಿದೆ. 1952ರಲ್ಲಿ ಸಿಂದಗಿ ಕುಲಕರ್ಣಿ ಮನೆತನದಿಂದ ಮಠಕ್ಕೆ ದಾನವಾಗಿ ನೀಡಿದ್ದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ದೊರಕಿದೆ.
ಶಂಕರಲಿಂಗ ಮಹಾಪುರುಷರ ಹೆಸರಲ್ಲಿರುವ 8 ಏಕರೆ 16 ಗುಂಟೆ ಜಮೀನು ನೀಡಿದ್ದು 2018-19ರಲ್ಲಿ ಮಠದ ಪಹಣಿಯಲ್ಲಿ ವಕ್ಫ ಹೆಸರು ಸೇರ್ಪಡೆಯಾಗಿದ್ದು. 2018 ರಲ್ಲಿ ಯತಿಮ್ ಶಾ ವಾಲಿ ಜಾಮೀಯಾ ಮಸೀದ್ ಸುನ್ನಿ ವಕ್ಫ ಬೋರ್ಡ ಹೆಸರಲ್ಲಿ ಸೇರ್ಪಡೆಯಾಗಿದೆ. ಈ ವಿಶಯ ತಿಳಿದ ಕೂಡಲೆ ಮಠದ ಪೀಠಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದು. ಮಠದ ಪೀಠಾಧಿಕಾರಿ ಸಿದ್ದರಾಜು ಸ್ವಾಮೀಜಿಗಳು ವಕ್ಫ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು. ನಮ್ಮ ಮಠದ ಆಸ್ತಿ ಮಠಕ್ಕೆ ಸಲ್ಲಬೇಕು ಈ ಆಸ್ತಿಯನ್ನು ಕುಲಕರ್ಣೀ ಮನೆತನ ನೀಡಿದ ಆಸ್ತಿಯಾಗಿದೆ ಎಂದು ತಿಳಿಸಿದ್ದಾರೆ. ಮಠದ ಆಸ್ತಿ ವಕ್ಫ್ ಪಾಲಾಗಿರುವುದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.