Wednesday, January 22, 2025

ಎಸ್​ಬಿಐ ಬ್ಯಾಂಕ್​ ದರೋಡೆ : ಲಾಕರ್ ಮುರಿದು 12.95 ಕೋಟಿ ಚಿನ್ನಭರಣ ಎಗರಿಸಿದ ಖದೀಮರು

ದಾವಣಗೆರೆ : ಗ್ಯಾಸ್​ ಕಟರ್​ ಬಳಸಿ ಬ್ಯಾಂಕ್​ ಲಾಕರ್​ ಮುರಿದು ಚಿನ್ನಾಭರಣಗಳನ್ನು ಎಗರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು. ಬರೋಬ್ಬರಿ  13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಎಸ್​ಬಿಐ ಬ್ಯಾಂಕ್ ನಲ್ಲಿ ದರೋಡೆ ನಡೆದಿದ್ದು. ಬೀಗ ಮುರಿದು ಒಳಗೆ ಬಂದಿರುವ ಖದೀಮರು ಸುಮಾರು 13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿ ಪರಾರಿಯಾಗಿದ್ದಾರೆ. ಬ್ಯಾಂಕ್​ ಲಾಕರ್​ನಲ್ಲಿದ್ದ ಗ್ರಾಹಕರ ಚಿನ್ನವನ್ನು ಎಗರಿಸಿರುವ ಖದೀಮರು, ಬ್ಯಾಂಕ್​ನಲ್ಲಿ ಸಾಕ್ಷನಾಶ ಪಡಿಸಿ ಓಡಿ ಹೋಗಿದ್ದಾರೆ.

ಬ್ಯಾಂಕ್​ ಲಾಕರ್​ನಲ್ಲಿದ್ದ ಸುಮಾರು 12.95 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳುವಾಗಿದ್ದು. ಕಳ್ಳತನ ಮಾಡಿದ ಮೇಲೆ ಬ್ಯಾಂಕ್​ ತುಂಬ ಖಾರದ ಪುಡಿ ಎರಚಿ ಸಾಕ್ಷ ನಾಶ ಪಡಿಸಿದ್ದಾರೆ ಮತ್ತು  ಸಿಸಿಟಿವಿ ಡಿವಿಆರ್​ಗಳನ್ನು ಹೊತ್ತೊಯ್ದಿದ್ದಾರೆ. ಪ್ರಕರಣ ಸಂಭದ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು 5 ತಂಡಗಳನ್ನು ರಚನೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿನ್ನಾಭರಣ ಕಳೆದುಕೊಂಡಿರುವ ಗ್ರಾಹಕರು ಆತಂಕದಲ್ಲಿದ್ದು. ಆದಷ್ಟು ಬೇಗ ಕಳ್ಳರನ್ನು ಹಿಡಿಯುವುದಾಗಿ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್  ಹೇಳಿಕೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES