Wednesday, January 22, 2025

ಐರನ್​ ಮ್ಯಾನ್​ ಆದ ತೇಜಸ್ವಿ ಸೂರ್ಯ: ಪ್ರಧಾನಿಯಿಂದ ಮೆಚ್ಚುಗೆ

ಗೋವ : ಸಂಸದ ತೇಜಸ್ವಿ ಸೂರ್ಯ ಮತ್ತೊಂದು ಸಾಧನೆ ಮಾಡಿದ್ದು. ಗೋವಾದಲ್ಲಿ ನಡೆದ ಟ್ರಾಯಥ್ಲಾನ್​ನಲ್ಲಿ ಭಾಗವಹಿಸಿ ಯಶಸ್ವಿಯಾಗಿ ತಮ್ಮ ಗುರಿಯನ್ನು ಮುಟ್ಟಿ ಐರನ್​ ಮ್ಯಾನ್​ 70.3ಯನ್ನು ಪೂರ್ಣಗೊಳೀಸಿದ್ದಾರೆ.

ಗೋವಾದಲ್ಲಿ ನಡೆದ ಟ್ರಾಯಥ್ಲಾನ್​ನಲ್ಲಿ ಭಾಗವಹಿಸಿದ ಬೆಂಗಳೂರ ದಕ್ಷಿನ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ
8.27 ಗಂಟೆಯಲ್ಲಿ ಸೈಕ್ಲಿಂಗ್, ಈಜು, ರನ್ನಿಂಗ್ ರೇಸ್ ಪೂರ್ಣಗೊಳಿಸುವ ಮೂಲಕ‌ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ.

ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್ ಆಯೋಜಿಸಿದ್ದ ಟ್ರಯಥ್ಲಾನಲ್ಲಿ ವಿಶ್ವದ 50 ದೇಶಗಳ ಅಥ್ಲೀಟ್ ಗಳು ಭಾಗವಹಿಸಿದ್ದರು. ಲೋಕಸಭಾ ಸದಸ್ಯನಾಗಿ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ತೇಜಸ್ವಿ ಸೂರ್ಯ
8.27 ಗಂಟೆಯಲ್ಲಿ 90 km ಸೈಕ್ಲಿಂಗ್, 1.9 ಕಿಮೀಈಜು, 21km ರನ್ನಿಂಗ್ ರೇಸ್ ಓಡಿ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ತೇಜಸ್ವಿ ಸೂರ್ಯ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು.ಇದು ಖಂಡಿತವಾಗಿಯೂ ಬಹಳಷ್ಟು ಯುವಜನರಿಗೆ ಸ್ಪೂರ್ತಿಯಾಗಲಿದೆ ಎಂದ ಹೇಳಿದ್ದಾರೆ.

RELATED ARTICLES

Related Articles

TRENDING ARTICLES