Wednesday, January 22, 2025

IND vs NZ Test | ಭಾರತಕ್ಕೆ ಹಿನ್ನಡೆ: ನ್ಯೂಜಿಲೆಂಡ್‌ಗೆ 301 ರನ್‌ಗಳ ಮುನ್ನಡೆ

ಪುಣೆ : ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಪಂದ್ಯದಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ ಪ್ರವಾಸಿ ತಂಡ 301 ರನ್‌ಗಳ ಮುನ್ನಡೆ ಪಡೆದಿದೆ. ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್‌ನಲ್ಲಿ 53 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 198 ರನ್‌ಗಳಿಸಿದೆ. ಈ ಮೂಲಕ 301 ರನ್‌ಗಳ ಮುನ್ನಡೆ ಪಡೆದುಕೊಂಡಿದೆ.

ಟಾಮ್ ಲಾಥಮ್ 86 ರನ್ ಗಳಿಸಿ ದಿಟ್ಟ ಹೋರಾಟ ತೋರಿದರು. ಭಾರತದ ಪರ ವಾಷಿಗ್ಟನ್ ಸುಂದರ್ ಮತ್ತೆ 4 ವಿಕೆಟ್ ಪಡೆದುಕೊಂಡು ಗಮನ ಸೆಳೆದರು. ಅಶ್ವಿನ್ 1 ವಿಕೆಟ್ ಪಡೆದರು.ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುಗ್ಗರಿಸಿದ್ದ ಭಾರತದ ಬ್ಯಾಟರ್‌ಗಳು ಎರಡನೇ ಪಂದ್ಯದಲ್ಲೂ ನೀರಸ ಪ್ರದರ್ಶನ ತೋರಿದ್ದಾರೆ. ಪ್ರವಾಸಿ ತಂಡ ಗಳಿಸಿದ್ದ 259 ರನ್ ಎದುರು ಕೇವಲ 156 ರನ್‌ಗೆ ಸರ್ವಪತನಗೊಳ್ಳುವ ಮೂಲಕ 103 ರನ್‌ಗಳ ಹಿನ್ನಡೆ ಅನುಭವಿಸಿದ್ದಾರೆ.

ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸಿದ್ದ ಟೀಂ ಇಂಡಿಯಾ, ಎರಡನೇ ದಿನದಾಟದ ಆರಂಭದಲ್ಲೇ ಟಾಮ್ ಲೇಥಮ್ ಬಳಗದ ಸ್ಪಿನ್ ಖೆಡ್ಡಾಗೆ ಉರುಳಿತು. ಕೇವಲ 156 ರನ್‌ಗಳಿಗೆ ಸರ್ವಪತನವಾಯಿತು.

ಯುವ ಬ್ಯಾಟರ್ ಶುಭಮನ್ ಗಿಲ್ (30 ರನ್) ಅವರು ತಂಡದ ಮೊತ್ತ 50 ರನ್ ಆಗಿದ್ದಾಗ ಔಟಾಗುವುದರೊಂದಿಗೆ ಪೆವಿಲಿಯನ್ ಪರೇಡ್ ಆರಂಭವಾಯಿತು. ಅನುಭವಿ ವಿರಾಟ್ ಕೊಹ್ಲಿ (1) ಹೆಚ್ಚು ಹೊತ್ತು ನಿಲ್ಲದೆ ಮರಳಿದರು. ಯಶಸ್ವಿ ಜೈಸ್ವಾಲ್ (30 ರನ್), ರಿಷಬ್ ಪಂತ್ (18 ರನ್), ಸರ್ಫರಾಜ್ ಖಾನ್ (11 ರನ್), ರವಿಚಂದ್ರನ್ ಅಶ್ವಿನ್ (4 ರನ್) ಅವರ ಹಿಂದೆಯೇ ನಡೆದರು. ರವೀಂದ್ರ ಜಡೇಜ ಕೆಲಕಾಲ ಸ್ಕ್ರೀಸ್​ನಲ್ಲಿ ನಿಂ.ತು 38 ರನ್ ಗಳಿಸಿದರು. ಇದು ಭಾರತದ ಪರ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ವಾಷಿಂಗ್ಟನ್ ಸುಂದರ್ ಅಜೇಯ 18 ರನ್ ಗಳಿಸಿ ಸಹ ಉಪಯುಕ್ತ ಆಟವಾಡಿದರು. ಹೀಗಾಗಿ ತಂಡದ ಮೊತ್ತ 150ರ ಗಡಿ ದಾಟಿತು.

ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಮಿಚೇಲ್ ಸ್ಯಾಂಟ್ಸರ್ 53 ರನ್ ನೀಡಿ 7 ವಿಕೆಟ್ ಪಡೆದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಜೀವನಶ್ರೇಷ್ಠ ಸಾಧನೆಯಾಯಿತು. ಅವರಿಗೆ ಉತ್ತಮ ಸಹಕಾರ ನೀಡಿದ ಗ್ರೆನ್ ಫಿಲಿಪ್ಸ್ (26 ರನ್‌ಗೆ 2 ವಿಕೆಟ್) ತಮ್ಮ ತಂಡಕ್ಕೆ ಉತ್ತಮ ಮುನ್ನಡೆ ತಂದುಕೊಟ್ಟರು.

RELATED ARTICLES

Related Articles

TRENDING ARTICLES