ರಷ್ಯಾ : 5 ವರ್ಷದ ನಂತರ ಚೀನಾ-ಭಾರತ ಮುಖಾಮುಖಿಯಾಗಿವೆ. ಮೋದಿ-ಜಿನ್‌ಪಿಂಗ್ ಈ ಸಭೆಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತಾರೆ ಎಂಬ ಮಾಹಿತಿ ದೊರೆತಿದೆ.
ಬ್ರಿಕ್ಸ್ ಶೃಂಗಸಭೆ 2024 ಅನ್ನು ರಷ್ಯಾದ ಕಜಾನ್‌ನಲ್ಲಿ ಆಯೋಜಿಸಲಾಗಿದೆ, ಅಕ್ಟೋಬರ್ 22, 23 ಮತ್ತು 24ರ ತನಕ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಏತನ್ಮಧ್ಯೆ, ಸುಮಾರು 5 ವರ್ಷಗಳ ನಂತರ ಇಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಧಾನಿ ಮೋದಿ ಪರಸ್ಪರ ದ್ವಿಪಕ್ಷೀಯ ಸಭೆ ನಡೆಸುತ್ತಿರುವುದರಿಂದ ಭಾರೀ ಕುತೂಹಲ ಮೂಡಿಸಿದೆ.
ಕಜಾನ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಪಾಲ್ಗೊಳ್ಳಲು ರಷ್ಯಾಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಇಂದು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಐದು ವರ್ಷಗಳಲ್ಲಿ ಉಭಯ ನಾಯಕರ ನಡುವಿನ ಮೊದಲ ಔಪಚಾರಿಕ ಭೇಟಿ ಇದಾಗಿದ್ದು, ಹೀಗಾಗಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ನಡುವಿನ ಈ ದ್ವಿಪಕ್ಷೀಯ ಮಾತುಕತೆ ಭಾರೀ ಕುತೂಹಲ ಕೆರಳಿಸಿದೆ. ಮಂಗಳವಾರ ಸಂಜೆ ಕಜಾನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಸಭೆ ನಡೆಯಲಿದೆ ಎಂದು ಖಚಿತಪಡಿಸಿದ್ದು, ಈ ಸಭೆಯ ಸಮಯವನ್ನು ಕೆಲವೇ ಕ್ಷಣಗಳಲ್ಲಿ ತಿಳಿಸ್ತೀವಿ ಎಂದು ಹೇಳಿದ್ದಾರೆ.