ಬೆಂಗಳೂರು : ವಯೋ ಸಹಜ ಖಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಸುದೀಪ್ ಅವರ ತಾಯಿ ಇಂದು (ಅ.20) ಮುಂಜಾನೆ 7:04ಕ್ಕೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಚಿತ್ರರಂಗ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶ್ರೀಮತಿ ಸರೋಜಾ ಸಂಜೀವ್ ಅವರು ಅಸ್ತಂಗತರಾಗಿದ್ದು. ಇವರ ಅಗಲಿಕೆಗೆ ಸಾ.ರಾ ಗೋವಿಂದು, ಡಿ.ಕೆ ಸುರೇಶ್, ಸಂತಾಪ ಸೂಚಿಸಿದ್ದು. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮನೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದು. ಸರೋಜಾ ಅವರು ಸಾಕ್ಷಾತ್ ಅನ್ನಪೂರ್ಣೇಶ್ವರಿಯ ತರ ಇದ್ದರು. ಇವರ ಮನೆಗೆ ಯಾರೆ ಹೋದರು ತಾಯಿ ಮಮತೆಯಿಂದ ನೋಡುತ್ತಿದ್ದರು ಎಂದು ಹೇಳಿದ್ದಾರೆ.
ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಇಂದ್ರಜಿತ್ ಲಂಕೇಶ್, ನಟಿ ತಾರಾ, ಜಯಮಾಲ ಸೇರಿದಂತೆ ಹಲವರು ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದ್ದಾರೆ. ಇಂದು ಸಂಜೆ 5 ರಿಂದ 7 ರವರೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ (cremation) ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.