Wednesday, October 16, 2024

ರೊಟ್ಟಿ ಸೇವನೆಯಿಂದ ಒಂದೇ ಕುಟುಂಬದ 7 ಜನ ಅಸ್ವಸ್ಥ!

ರಾಯಚೂರು : ಒಂದೇ ಕುಟುಂಬದ ಏಳು ಜನರಿಗೆ ಪುಡ್ ಪಾಯಿಸನ್ ಆದ ಘಟನೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಕುಳಿತು ಒಟ್ಟಾಗಿ ಊಟ ಸೇವಿಸುತ್ತಿದ್ದ 7 ಜನರಿಗೆ ತೀವ್ರ ವಾಂತಿ ಭೇದಿಯಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗಿನ ಉಪಹಾರವಾಗಿ ರೊಟ್ಟಿ, ಬೆಂಡೆಕಾಯಿ ಪಲ್ಯವನ್ನು ಕುಟುಂಬಸ್ಥರು ಸೇವಿಸುತ್ತಿದ್ದಾಗ ಘಟನೆ  ನಡೆದಿದ್ದು. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ಘಟನೆ. ನಡೆದಿದೆ. ಲಕ್ಷ್ಮೀ, ಮಾಳಪ್ಪ, ಬಸಲಿಂಗಪ್ಪ, ಗೌರಮ್ಮ, ಗುರುಬಸಮ್ಮ, ಮಲ್ಲಿಕಾರ್ಜುನ ಸೇರಿ ಒಟ್ಟು 7 ಜನ ಅಸ್ವಸ್ಥರಾಗಿದ್ದು.

ಊಟದ ಬಳಿಕ ಏಕಾಏಕಿ 7 ಜನರಿಗೆ ತೀವ್ರ ವಾಂತಿ-ಭೇದಿ ಶುರುವಾಗಿದೆ. ಲಿಂಗಸಗೂರು ತಾಲೂಕು ಆಸ್ಪತ್ರೆಯಲ್ಲಿ 7 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕಲುಷಿತ ನೀರಿನಿಂದ ಪುಡ್ ಪಾಯ್ಸನ್ ಆಗಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗುತ್ತಿದೆ..

RELATED ARTICLES

Related Articles

TRENDING ARTICLES