Wednesday, October 16, 2024

ಆಕ್ಷನ್ ಪ್ರಿನ್ಸ್ ಆ್ಯಕ್ಷನ್​​ಗೆ ಫಿದಾ ಆದ ಪ್ರೇಕ್ಷಕರು : ಚಿತ್ರಕ್ಕೆ ದೇಶದಾದ್ಯಂತ ಭಾರೀ ರೆಸ್ಪಾನ್ಸ್​

ಬೆಂಗಳೂರು : ಎಲ್ಲಾ ಅಡೆತಡೆಳನ್ನು ದಾಟಿ ಸ್ಯಾಂಡಲ್ ವುಡ್​ನ ಬಹು ನಿರೀಕ್ಷಿತ ಸಿನಿಮಾ ‘ಮಾರ್ಟಿನ್’ಪ್ರಪಂಚದಾದ್ಯಂತ ರಿಲೀಸ್ ಆಗಿದೆ. ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಸಿನಿಮಾಗಾಗಿ ಒದ್ದಾಡ್ತಾಯಿದ್ದ ಧ್ರುವ ಸರ್ಜಾ ಕೊನೆಗೂ ಅಪ್ಪಳಿಸಿ ಫ್ಯಾನ್ಸ್​ಗೆ ದರ್ಶನ ಕೊಟ್ಟಿದ್ದಾರೆ. ಹೈ ಬಜೆಟ್​​ನಲ್ಲಿ ನಿರ್ಮಾಣ ಆಗಿರೋ ‘ಮಾರ್ಟಿನ್ ಸಿನಿಮಾ, ಹೈ ಕ್ವಾಲಿಟಿಯಿಂದ ಸಿದ್ಧವಾಗಿದೆ. ಕ್ವಾಲಿಟಿ, ಕ್ವಾಂಟಿಟಿಯಲ್ಲಿ ನಿರ್ಮಾಣ ಆಗಿರುವ ಈ ಸಿನಿಮಾವನ್ನು ಜನರು ಮೆಚ್ಚುವಂತೆ ಮಾಡುವಲ್ಲಿ ನಿರ್ದೇಶಕ ಉದಯ್ ಕೆ. ಮೆಹ್ತಾ ಸಫಲರಾಗಿದ್ದಾರೆ.

ಇನ್ನೂ ‘ಮಾರ್ಟಿನ್ ಸಿನಿಮಾ ಕನ್ನಡ ಸೇರಿದಂತೆ, ತೆಲುಗು, ತಮಿಳು, ಹಿಂದಿ, ಮಲಯಾಳಂ ಜೊತೆಗೆ ವಿಶ್ವದ 13 ಭಾಷೆಗಳಲ್ಲಿ ಏಕಕಾಲಾದಲ್ಲಿ ಸಿನಿಮಾ ರಿಲೀಸ್ ಆಗಿದೆ. ಬೇರೆ ಭಾಷೆಗಳಲ್ಲಿಯೂ ‘ಮಾರ್ಟಿನ್’ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದ್ಧೂರಿ, ಭರ್ಜರಿ ಸಿನಿಮಾಗಳ ನಂತರ ಮತ್ತೆ ಒಂದಾದ ಧ್ರುವಾ ಹಾಗೂ ಎಪಿ. ಅರ್ಜುನ್ ಜೋಡಿ ಮೋಡಿ ಮಾಡಿದೆ .ಸಿನಿಮಾ ನೊಡಿದ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದು ಪ್ಯಾನ್ ಇಂಡಿಯಾವನ್ನು ಕೊಳ್ಳೆ ಹೊಡೆಯೋದು ಪಕ್ಕಾ ಅಂತಿದ್ದಾರೆ .

ಇನ್ನೂ ‘ಮಾರ್ಟಿನ್’ಸಿನಿಮಾದಲ್ಲಿ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಿದೆ. ಮಣಿಶರ್ಮ ಮ್ಯೂಸಿಕ್ ಮಾಡಿದ್ರೆ, ರವಿ ಬಸ್ರೂರ್ ಬ್ಯಾಗ್ರೌಂಡ್ ಮ್ಯೂಸಿಕ್ ನೀಡಿದ್ದಾರೆ. ಇನ್ನೂ ಸಿನಿಮಾದಲ್ಲಿ ಮೂಡಿ ಬಂದಿರೋ ಹಾಡುಗಳು ಕೂಡ ಸೂಪರ್ ಹಿಟ್ ಆಗಿದೆ. ಧ್ರುವಾ ಹಾಗೂ ವೈಭವಿ ರೊಮ್ಯಾಂಟಿಕ್ ಸಾಂಗ್ ಜೊತೆಗೆ ಟೈಟಲ್ ಸಾಂಗ್ ಕೂಡ ಫ್ಯಾನ್ಸ್​​ಗೆ ಸಖತ್ ಕಿಕ್ ಕೊಟ್ಟಿದೆ. ಇನ್ನೂ ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ನಾಯಕ ನಟ ಧ್ರುವಾ ಸರ್ಜಾ, ನಟಿ ವೈಭವಿ, ನಿರ್ಮಾಪಕ ಯದಯ್ ಕೆ ಮೆಹ್ತಾ, ನಿರ್ದೇಶಕ ಎಪಿ ಅರ್ಜುನ್, ಕೊರಿಯೋಗ್ರಾಫರ್ಗಳಾದ ಇಮ್ರಾನ್ ಸರ್ದಾರಿಯಾ ಮಾಸ್ಟರ್ ಹಾಗೂ ಮುರುಳಿ ಮಾಸ್ಟರ್,ಜೊತೆಗೆ ಫೈಟ್ ಮಾಸ್ಟರ್ ರವಿ ವರ್ಮಾ ಕೂಡ ಮೊದಲ ದಿನದ ರಿಯಾಕ್ಷನ್ ನೋಡಿ ಫುಲ್ ಖುಷಿಯಾಗಿದ್ದಾರೆ.

ಇನ್ನೂ ‘ಮಾರ್ಟಿನ್’ಸೃಷ್ಟಿಕರ್ತ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಬರೆದ ಕಥೆಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಅಳಿಯನಿಗಾಗಿ ಬರೆದ ನ್ಯಾಷನಲ್ ಲೆವೆಲ್ ಕಥೆ ಎಲ್ಲರಿಗೂ ಇಷ್ಟವಾಗಿದೆ. ಸ್ಕ್ರೀನ್ ಪ್ಲೇ ಜೊತೆ ಅರ್ಜುನ್ ಸರ್ಜಾ ತುಂಬಾ ಆಟವಾಡಿರೋದು ಸಿನಿಮಾದ ಪ್ರತೀ ಸೀನ್​​​​ನಲ್ಲಿಯೂ ಗೊತ್ತಾಗುತ್ತೆ.

ಇನ್ನೂ ಸಿನಿಮಾದ ಕಥೆ ಏನು ಅಂತೀರಾ.? ಟೀಸರ್ ಟ್ರೈಲರ್ ಹೇಳುವಂತೆ ಇದೊಂದು ಆರ್ಮಿ ಬೇಸಡ್ ಕಥೆಯಲ್ಲ ಅನ್ನೋದನ್ನ ಬಿಟ್ರೆ ಬೇರೇನನ್ನೂ ಹೇಳಲು ಸಾಧ್ಯವಿಲ್ಲ ಕಾರಣ ಕಥೆ ಬಗ್ಗೆ ವಿಮರ್ಷೆ ಮಾಡಲು ಹೊರೆಟ್ರೆ ಮೂಲ ಕಥೆಯನ್ನ ಹೇಳಬೇಕಾಗುತ್ತದೆ. ಆದ್ರೆ ಕೊಟ್ಟ ಕಾಸಿಗೆ, ಇಟ್ಟ ಸಮಯಕ್ಕೆ ‘ಮಾರ್ಟಿನ್’ನ್ಯಾಯ ಒದಗಿಸಿದ್ದಾನೆ ಅನ್ನೋದು ಮಾತ್ರ ಫಿಕ್ಸ್. ಒಟ್ಟಾರೆ ‘ಮಾರ್ಟಿನ್ ಪಕ್ಕಾ ಪೈಸಾ ವಸೂಲ್ ಸಿನಿಮಾ ಅಂದ್ರೂ ತಪ್ಪಾಗಲ್ಲ..

ಇನ್ನೂ ಬೇರೆ ಬೇರೆ ಭಾಷೆಗಳಲ್ಲಿಯೂ ‘ಮಾರ್ಟಿನ್’ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದ. ಧ್ರುವಾ ಸರ್ಜಾ ನಟನೆ ಹಾಗೂ ಆ್ಯಕ್ಷನ್ ಸೀನ್​ಗಳಿಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಮೊದಲ ಸಿನಿಮಾ ಆದ್ರೂ ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ಪ್ರೇಕ್ಷಕರು ಮಾರ್ಟಿನ್ ಸಿನಿಮಾಗೆ ಸೂಪರ್ ಸಿಂಬಲ್ ಕೊಟ್ಟಿದ್ದಾರೆ. ಇನ್ನೂ ಹಿಂದಿ ಭಾಷೆಯಲ್ಲಿಯು ‘ಮಾರ್ಟಿನ್ ಗೆ ಬೆಸ್ಟ್ ಓಪನಿಂಗ್ ಸಿಕ್ಕಿದೆ. ಹಿಂದಿ ಆಡಿಯನ್ಸ್ ಕೂಡ ಮಾರ್ಟಿನ್ ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES