Wednesday, October 16, 2024

ಹುಬ್ಬಳಿ ಗಲಭೆ ಪ್ರಕರಣ ವಾಪಸ್​ ; ರಾಜ್ಯ ಸರ್ಕಾರದ ವಿರುದ್ಧ ಜಗದೀಶ್​​ ಶೆಟ್ಟರ್​ ಗರಂ

ಹುಬ್ಬಳ್ಳಿ : ನೆನ್ನೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯದ ವಿವಿಧ ಪೋಲಿಸ್ ಠಾಣೆಯಲ್ಲಿರುವ 60 ಪ್ರಕರಣಗಳನ್ನು ವಾಪಾಸು ಪಡೆಯಲಾಗಿದೆ. ಈ ಪ್ರಕರಣಗಳಲ್ಲಿ ಹುಬ್ಬಳ್ಳಿಯ ಗಲಭೆ ಪ್ರಕರಣ ಹಿಂಪಡೆಯುವ ನಿರ್ಧಾರವನ್ನು ರಾಜ್ಯ ಸರಕಾರ ಮಾಡಿದ ಇದರ ಕುರಿತಂತೆ ಸಂಸದ ಜಗದೀಶ್ ಶೆಟ್ಟರ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಮಾತಮಾಡಿದ ಶೆಟ್ಟರ್ ಯಾವ ಕೇಸು ಮರಳಿ ಪಡೆಯಬೇಕು ಯಾವ ಕೇಸು ಮರಳಿ ಪಡೆಯಬಾರದು ಅನ್ನೋದು ತಿಳಿಯಬೇಕಿತ್ತು. ಸಾಮಾನ್ಯವಾಗಿ ಎಲ್ಲ ಸರಕಾರವಿದ್ದಾಗ ಕೆಲ ಕೇಸು ಮರಳಿ ಪಡೆಯೋದು ಸಾಮಾನ್ಯರೈತ ಹೋರಾಟ ಕೇಸು ಹಿಂಪಡೆದರೆ ಸರಿ ಆದರೆ ಪೊಲೀಸ್ ಠಾಣೆ ಮೇಲೆ ದಾಳಿ, ಪೊಲೀಸರ ಮೇಲೆ ದಾಳಿ ಮಾಡಿದ ಕೇಸು ಮರಳಿ ಪಡೆದಿದ್ದು ಸರಿಯಲ್ಲ ಇದು ಕಾನೂನು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಲು ಅವಕಾಶ ನೀಡುತ್ತೆ ಈ ಬಗ್ಗೆ ಕೈ ಸರಕಾರ ಯೋಚಿಸಬೇಕಿತ್ತು ಎಂದು ಹೇಳಿದರು.

ಒಂದು ಕೋಮನ್ನು ಒಲಿಸಿಕೊಳ್ಳಲು ಈ ರೀತಿ ಮಾಡಲಾಗುತ್ತಿದೆ. ಇದೇ ರೀತಿಯ ಕೃತ್ಯಗಳನ್ನು ಮಾಡಲು  ಹೆಚ್ಚು ಪ್ರೋತ್ಸಾಹ ಕೊಡಲು ಈ ರೀತಿ ಮಾಡಲಾಗುತ್ತಿದೆ ಇದರಿಂದ ಕಾನೂನು ಸುವ್ಯವಸ್ಥೆ ಮತ್ತಷ್ಟು ಹದಗೆಡುತ್ತೆ ಈ ನಿರ್ಧಾರ ಕಾನೂನಿನಡಿ ಎಷ್ಟು ನಿಲ್ಲುತ್ತೋ ಗೊತ್ತಿಲ್ಲ.ಕೇಸಿನ ಫೈಲ್ ನೋಡಿದರೆ ಮರಳಿ ಪಡೆಯಲು ಆಗೋದಿಲ್ಲ, ಆದರೂ ಕ್ಯಾಬಿನೆಟ್‌ನಲ್ಲಿ ಒಪ್ಪಿಗೆ ಪಡೆಯಲಾಗಿದೆ ಇದು ಕಾನೂನು ಬಾಹಿರ ಎಂದು ಕೈ ಸರ್ಕಾರದ ಮೇಲೆ ಅಕ್ರೋಶ ವ್ಯಕ್ತಪಡಿಸಲಾಯಿತು.

ಇದು ಅಲ್ಪಸಂಖ್ಯಾತರ ತುಷ್ಟೀಕರಣವಾಗಿದೆ ಸರ್ಕಾರ ಇಡೀ ಸಮಾಜವನ್ನು ಒಂದಾಗಿ ನೋಡಬೇಕು. ಸಮಾಜದಲ್ಲಿ ವ್ಯವಸ್ಥೆ ಹದಗೆಡುವ ರೀತಿಗೆ ಪ್ರೋತ್ಸಾಹ ಕೊಡಬಾರದು ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡುತ್ತಿದೆ. ಇದರಿಂದ ರಾಜ್ಯಕ್ಕೆ ಒಳ್ಳೆಯದು ಆಗೋದಿಲ್ಲ ಎಂದು ಹೇಳಿದರು

ಶಿಕ್ಷೆ ಅನುಭವಿಸಿದ ಎಷ್ಟೋ ಅಮಾಯಕರು ಅನೇಕ ವರ್ಷಗಳಿಂದ ರೌಡಿ ಶೀಟರ್ ಲೀಸ್ಟ್​ನಲ್ಲಿದ್ದಾರೆ.  ಅವರ ಮೇಲೆ ರೌಡಿ ಶೀಟ್ ಹಾಗೆಯೇ ಮುಂದುವರೆದಿದೆ. ಇದರಿಂದ ಕೆಲ ಅಮಾಯಕರು ತೊಂದರೆಯಲ್ಲಿದ್ದಾರೆ. ಅಂಥವರ ರೌಡಿ ಶೀಟ್ ತೆಗೆಯಲಿ, ಆ ಮೂಲಕ ಅವರನ್ನು ಒಳ್ಳೆಯವರನ್ನಾಗಿ ಮಾಡಲಿ ಆದರೆ ಗೂಂಡಾಗಿರಿ ಮಾಡಿದವರ ಕೇಸ್ ಮರಳಿ ಪಡೆದಿದ್ದಾರೆ ಇದು ರಾಜ್ಯ ಸರ್ಕಾರದ ತುಷ್ಟಿಕರಣಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES