Wednesday, October 16, 2024

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವ ಮುನ್ನ ಎಚ್ಚರ !

ಧಾರವಾಡ : ನಗರದಲ್ಲಿ ಹನಿ ಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿ ನಂತರ ಖಾಸಗಿ ವಿಡಿಯೋ ಚಿತ್ರಿಕರಿಸಿ ಬ್ಲಾಕ್​ಮೇಲ್ ಮಾಡುತ್ತಿದ್ದ ಗ್ಯಾಂಗ್​ನ್ನು ಬಂಧಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ನಗರದಲ್ಲಿದ್ದ ಹನಿ ಟ್ರ್ಯಾಪ್ ಮಾಡುತ್ತಿದ್ದ 4 ಜನರ ತಂಡವನ್ನು ಬಂಧಿಸಿದ್ದು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ, ಮೊದಲು ಸಾಮಾಜಿಕ ಜಾಲತಾಣದಲ್ಲಿ ಗೆಳೆತನ ಮಾಡುವ ಮಹಿಳೆಯರು ಬಳಿಕ ಬಳಿಕ ಅವರನ್ನ ಪುಸಲಾಯಿಸಿ ಭೇಟಿ ಮಾಡೋಣ ಎಂದು ಹೇಳುತ್ತಿದ್ದರು ಭೇಟಿಗೆ ಬಂದಾಗ ಅವರ ಜೊತೆಗಿನ ವಿಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್​ ಮಾಡುತ್ತಿದ್ದರು ಎಂದು ಪೋಲಿಸರು ಮಾಹಿತಿ ನೀಡಿದರು

ಸದ್ಯ ಗ್ಯಾಂಗ್ ವಶಕ್ಕೆ ಪಡೆದಿರುವ ಧಾರವಾಡ ವಿದ್ಯಾಗಿರಿ ಪೊಲೀಸರು ಆಕಾಶ ಉಪ್ಪಾರ, ರೇಣುಕಾ ಉಪ್ಪಾರ್, ಮಲ್ಲಿಕ್ ಜಾನ್ ನದಾಫ್, ಗಜಾಲಾಭಾನು ನಗರಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಚಿನ್ನದ ಆಭರಣ, ಬೆಳ್ಳಿ, ಹಣ ಸೇರಿ ಒಂದು ಕಾರ್ ವಶಕ್ಕೆ ಪಡೆಯಲಾಗಿದೆ. ಒಟ್ಟು 14ಲಕ್ಷದ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ. ಸದ್ಯ ಇದೆ ರೀತಿ ರಾಜ್ಯದ ವಿವಿಧ ಜಿಲ್ಲೆಗಳ ಜನರಿಗೆ ವಂಚನೆ ಮಾಡಿರುವ ಗ್ಯಾಂಗ್ ವಿರುದ್ಧ ಒಟ್ಟು 4ಪ್ರಕರಣಗಳು ದಾಖಲಾಗಿದ್ದು ಮತ್ತಷ್ಟು ಜನ ವಂಚನೆಗೆ ಒಳಗಾಗಿರುವ ಬಗ್ಗೆ ಪೋಲಿಸರು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES