Wednesday, October 16, 2024

ಆಯುಧ ಪೂಜೆಗೂ ದುಡ್ಡಿಲ್ಲದೆ ದಿವಾಳಿ ಆಯ್ತಾ KSRTC ?

ಬೆಂಗಳೂರು : ಆಯುಧ ಪೂಜೆ ಬಸ್ ಸ್ಚಚ್ಚತೆ, ಅಲಂಕಾರಕ್ಕೆ ಕೇವಲ ಪುಡಿಗಾಸು ಬಿಡುಗಡೆ ಮಾಡಿದ ಕೆಎಸ್ಆರ್ಟಿಸಿ ಇಲಾಖೆ. ಒಂದು ಬಸ್​ ಪೂಜೆಗೆ ತಲಾ 100ರೂ ಖರ್ಚು ಮಾಡಬೇಕು ಎಂದು ಸೂಚನೆ ಹೊರಡಿಸಿರುವ ಇಲಾಖೆ.

ಪ್ರತಿಸಲದಂತೆ ಈ ವರ್ಷವೂ ಆಯುಧ ಪೂಜೆಯ ಖರ್ಚು ವೆಚ್ಚಕ್ಕೆ ನಗಣ್ಯ ಎನಿಸುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಬಸ್ಸಿನ ಸ್ವಚ್ಚತೆ ಮತ್ತು ಅಲಂಕಾರಕ್ಕೆ ಸೇರಿಸಿ ಕೇವಲ 100 ರೂಪಾಯಿ ಹಣ ಬಿಡುಗಡೆ ಮಾಡಿರುವ ಆಡಳಿತ ಮಂಡಳಿಯ ಜಿಪುಣತೆಗೆ ಕೆಎಸ್​​​ಆರ್​ಟಿಸಿ ಸಿಬ್ಬಂದಿಗಳು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಬಸ್ ಗಳನ್ನು ಚೆನ್ನಾಗಿ ಅಲಂಕಾರ ಮಾಡುಬೇಕು ಎಂಬ ಸಿಬ್ಬಂದಿಗಳ ಆಸೆಗೆ ಅಕ್ಷರಶಃ ತಣ್ಣೀರೆರಚಿರುವ  KSRTC ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಸಹ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬಿಡುಗಡೆ ಮಾಡಿರುವ 100 ರೂ ನಲ್ಲಿ ಒಂದು ಬಸ್ ಗೆ ಪೂಜೆ ಮಾಡೋಕೆ ಆಗುತ್ತಾ‌‌..? ಎಂದು ಪ್ರಶ್ನಿಸಿದ್ದಾರೆ.

ಹಬ್ಬದ ಹಿನ್ನಲೆಯಲ್ಲಿ ಹೂ-ಹಣ್ಣುಗಳ ಬೆಲೆಯಲ್ಲಿಯು ಸಾಕಷ್ಟು ಬೆಲೆ ಹೇರಿಕೆಯಾಗಿದ್ದು. ಶಕ್ತಿಯೋಜನೆಗೆ ಶ್ರಮಿಸುತ್ತಿರೋ ಬಸ್ ಗಳ ಪೂಜೆಗೆ ಕೇವಲ 100 ರೂಪಾಯಿ ನೀಡಿರುವುದು ನಿಜಕ್ಕೂ ನಾಚಿಕೆಗೇಡಿನ ಕೆಲಸವಾಗಿದೆ.

 

RELATED ARTICLES

Related Articles

TRENDING ARTICLES