Wednesday, October 9, 2024

ಕಾರ್ ಗ್ಲಾಸ್ ಒಡೆದು ಲ್ಯಾಪ್ ಟಾಪ್ ಕದಿಯುತ್ತಿದ್ದ ಖದೀಮರನ್ನು ಬಂಧಿಸಿದ ಪೋಲಿಸರು

ಬೆಂಗಳೂರು : ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಲ್ಯಾಪ್​ಟಾಪ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿದ್ದ ಖರ್ತನಾಕ್ ಅಣ್ಣ-ತಮ್ಮಂದಿರನ್ನು ಪೋಲಿಸರು ಬಂಧಿಸದ್ದಾರೆ. ವಾರಕೊಮ್ಮೆ ಬಂದು ತಮ್ಮ ಕೈಚಳಕ ತೋರಿಸಿ ಪರಾರಿಯಾಗುತ್ತಿದ್ದ ಕಳ್ಳರನ್ನು ಜಯನಗರ ಪೋಲಿಸರು ಬಂಧಿಸಿದ್ದಾರೆ.

ವಾರಕ್ಕೊಮ್ಮೆ ಬಂದು ಅರ್ಧಗಂಟೆಯಲ್ಲಿ ಕೆಲಸ ಮುಗಿಸಿ ಮತ್ತೆ ಸ್ಕೂಟಿಯಲ್ಲಿ ವಾಪಸ್ ತಮಿಳುನಾಡಿಗೆ ಹೋಗುತಿದ್ದ ಗ್ಯಾಂಗ್. ಬೆಂಗಳೂರಿನ ಜಯನಗರ, ಜೆಪಿ‌ ನಗರ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕಾರಿನ ಗ್ಲಾಸ್ ಹೊಡೆದು ಲ್ಯಾಪ್​ಟಾಪ್ ಕದಿಯುತ್ತಿದ್ದರು. ಕದ್ದ ಲ್ಯಾಪ್​ಟಾಪ್​ಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ಸಿಸಿಟಿವಿ ಜಾಡನ್ನು ಹಿಡಿದು ಆರೋಪಿಗಳ ಬೆನ್ನು ಬಿದ್ದ ಪೋಲಿಸರು ತಮ್ಮ ಸದಾನಾಯ್ಡು(35) ಎಂಬ ವ್ಯಕ್ತಿಯನ್ನು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಅಣ್ಣ ಗಂಗೇಶ್ ನಾಪತ್ತೆಯಾಗಿದ್ದು. ಇದಕ್ಕು ಮುನ್ನ ಇಂದಿರನಗರದಲ್ಲಿ ನಡೆದ ಕಳ್ಳತನದ ಆರೋಪದಲ್ಲಿ ಸಿಕ್ಕಿ ಬಿದ್ದು ತನ್ನ ಹಳೆಯ ಗ್ಯಾಂಗ್ ಸಹವಾಸ ಬಿಟ್ಟು ತನ್ನ ತಮ್ಮನೊಡನೆ ಸೇರಿ ಕಳ್ಳತನ ಮಾಡಲು ಆರಂಭಿಸಿದ್ದರು.

ಕದ್ದ ಲ್ಯಾಪ್​ಟಾಪ್​ಗಳನ್ನು ಆರೋಪಿಗಳು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ದೊರೆತಿದ್ದು. ಬಂಧಿತರಿಂದ 12 ಲಕ್ಷ ಮೌಲ್ಯದ 17 ಲ್ಯಾಪ್​ಟಾಪ್​ನ್ನು ಪೋಲಿಸರು ವಶಪಡಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES