Tuesday, October 8, 2024

ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ

ಗದಗ : ಕೆ.ಎಸ್ ಈಶ್ವರಪ್ಪ ಇಂದು ಬಿಜೆಪಿ ರಾಜ್ಯದ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ಮಾಡಿದ್ದು ರಾಜ್ಯ ಬಿಜೆಪಿಯಲ್ಲಿ ಎಲ್ಲವು ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ವಿಜಯೇಂದ್ರಗೆ ಕಾಂಗ್ರೆಸ್ ನಾಯಕರು ಹೇಳಿರುವ ಮಾತುಗಳನ್ನು ಪುನರುಚ್ಚರಿಸಿದರು. ಕಾಂಗ್ರೆಸ್ ಭಿಕ್ಷೆಯಿಂದ ನೀನು MLA ಆಗಿದ್ದೀಯಾ ಅಂತಾ ಸಾರ್ವಜನಿಕ ಸಭೆಯಲ್ಲಿ ಡಿ ಕೆ ಶಿವಕುಮಾರ ವಿಜಯೇಂದ್ರನಿಗೆ ಹೇಳಿದ್ರು ವಿಜಯೇಂದ್ರ ವಾಪಸ್ ಉತ್ತರ ಕೊಡಲಿಲ್ಲ. ಆದರೆ ನಾನು ಡಿ.ಕೆ ಶಿವಕುಮಾರ್​ಗೆ ಕೇಳ್ತೀನಿ ನೀವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅವರನ್ನ ಗೆಲ್ಲಿಸಿದ್ರಲ್ಲ ಏನ್ ಹೊಂದಾಣಿಕೆ ಆಗಿತ್ತು. ನಿಮಗೆ ವಿಜಯೇಂದ್ರ ಏನು ಅನುಕೂಲ ಮಾಡಿಕೊಟ್ಟ ಅದನ್ನ ಹೇಳಿ. ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಕೆ.ಎಸ್ ಈಶ್ವರಪ್ಪ ಎಲ್ಲಾ ಹೊಂದಾಣಿಕೆ ರಾಜಕಾರಣಕ್ಕೆ ಮಂಗಳ ಹಾಡಬೇಕು. ಪಕ್ಷದ ಸಿಧ್ಧಾಂತಕ್ಕೆ ವಿರುಧ್ಧವಾಗಿ ಹೋಗಿರೋ ವ್ಯಕ್ತಿಗಳ ವಿರುಧ್ಧ ಹೋರಾಟ ನಾವು ಹೋರಾಟ ಮಾಡುತ್ತಿದ್ದೇವೆ. ನಾನು ವಯಕ್ತಿಕವಾಗಿ, ವಿಜಯೇಂದ್ರ, ರಾಘವೇಂದ್ರ, ಯಡಿಯೂರಪ್ಪ ಗೆ ಹೇಳಲ್ಲ ಆದರೆ ಅವರು ಹೋಗ್ತಾ ಇರೋ ಧಾಟಿ ಇದೆಯಲ್ಲ ಯಾರೂ ಹೇಳೋರಿಲ್ಲ ಕೆರಳೋರಿಲ್ಲ ಅನ್ನೊ ಹಾಗಿದೆ ಎಂದು ಹೇಳಿದರು.

ಅಮಿತ್ ಶಾ, ನಡ್ಡಾ, ಮೋದಿ ಸೇರಿ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಮಾಡಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ನಡೆದ ಆರ್ ಎಸ್ ಎಸ್ ಸಭೆಯಲ್ಲಿ 40 ಜನರಲ್ಲಿ 37 ಜನ ಇವರಿಗೆ ಟೀಕೆ ಮಾಡಿದ್ದಾರೆ. ಹಿಂದೆ ಸಾಮೂಹಿಕ ನಾಯಕತ್ವದಲ್ಲಿ ಪಾರ್ಟಿ ಬೆಳೀತಾ ಬಂತು. ಈ ಸಮಯದಲ್ಲಿ ಬಿಜೆಪಿ 108 ಸ್ಥಾನ ಪಡೆದುಕೊಂಡಿದ್ದೆವು. ಆದರೆ ಈಗ ಕುಟುಂಬದ ಕೈಯಲ್ಲಿ ಸಿಲುಕಿ 66 ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದರು.

ಇದೇ ರೀತಿ ಮುಂದುವರೆದರೆ ಈ ಪಾರ್ಟಿ ಪರಿಸ್ಥಿತಿ ಎಲ್ಲಿಗೆ ಹೋಗತ್ತೋ ಗೊತ್ತಿಲ್ಲ. ಹೇಗೆ ಎದುರಿಸಬೇಕು ಯಾರಿಗೂ ತೋಚತಾ ಇಲ್ಲ ಅದೊಂದೇ ಕಾರಣಕ್ಕೆ ನಾನು ಚುನಾವಣೆ ನಿಂತಿದ್ದುಸಿ ಟಿ ರವಿಗೆ ನೇರವಾಗಿ ಎಂ ಎಲ್ ಎ ಎಲೆಕ್ಷನ್ ಸೋಲಿಸಿದ್ದಾರೆ. ಹಿಂದುತ್ವವಾದಿ ಪ್ರತಾಪ ಸಿಂಹನಿಗೆ ಟಿಕೇಟ್ ಕೊಡಲಿಲ್ಲಅನಂತ್ ಕುಮಾರ್ ಹೆಗಡೇ ಟಿಕೇಟ್ ಸಿಗಲಿಲ್ಲ. ಇದೆಲ್ಲಾ ಚರ್ಚೆ ಆಗಲಿ ಅನ್ನೋದಕ್ಕೋಸ್ಕರ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ,

ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲಬಹುದು. ಆದರೆ ತಂತ್ರಗಾರಿಕೆಯಿಂದ ತಾತ್ಕಾಲಿಕ ಯಶಸ್ಸು ಸಿಗುತ್ತದೆ. 17 ಜನ ಕಾಂಗ್ರೆಸ್ ನವರು ಬಿಜೆಪಿಗೆ ಬಂದ್ರು, ಹಾಗೆ ಸರ್ಕಾರಾನೂ ಬಂತು, ಒಳ್ಳೇ ಹೆಸರು ಬಂತಾ?.. ಕುಟುಂಬ ರಾಜಕಾರಣದಿಂದ ಹೊರ ಬರದಿದ್ದರೆ ಈ ಪಕ್ಷಕ್ಕೆ ಸಮಸ್ಯೆ ಇದೆ ಎಂದು ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

 

RELATED ARTICLES

Related Articles

TRENDING ARTICLES