Wednesday, October 9, 2024

ಮಹಿಳೆಯರ ಸುರಕ್ಷತೆಯ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿ ಹೊಂದಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ಗುಂಡೂರಾವ್

ಬೆಂಗಳೂರು : ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್ ಕೇಂದ್ರ ಸರ್ಕಾರ ಜಾನಿ‌ ಮಾಸ್ಟರ್ ಗೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗಿತ್ತು. ಅತ್ಯಾಚಾರ ಕೇಸ್ ನಲ್ಲಿ ಆಪಾದನೆ ಬಂದ ಮೇಲೆ ರಾಷ್ಟ್ರೀಯ ಪ್ರಶಸ್ತಿ ಹಿಂಪಡೆದುಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸುವರ ಮೇಲೆ ಸಹನೆ ಇರಬಾರದು, ಅಂಥವರ ಮೇಲೆ ಕರುಣೆ ಇರಬಾರದು, ಮಹಿಳೆಯರು ಹೆಚ್ಚೆಚ್ಚು ಸಾರ್ವಜನಿಕ ಕ್ಷೇತ್ರಕ್ಕೆ ಬರಬೇಕು, ಹೆಣ್ಣು ಮಕ್ಕಳಿಗೆ ಮುಕ್ತವಾದ ವಾತಾವರಣ ಇರಬೇಕು. ಅದನ್ನು ಮಾಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ ಸರ್ಕಾರದ ಮಟ್ಟದಲ್ಲಿ ಇದನ್ನು ಮಾಡಿದ್ದಾರೆ ಎಂದು ಬಿಜೆಪಿ ಜಾನಿ ಮಾಸ್ಟರ್ ವಿಶಯದಲ್ಲಿ ತೆಗೆದುಕೊಂಡಿರುವ ನಿಲುವನ್ನು ಶ್ಲಾಗಿಸಿದರು.

ಆದರೆ ಅದೇ ಬಿಜೆಪಿ ತಮ್ಮ ಪಕ್ಷದವರ ಮೇಲೆ ಏಕೆ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಯಡಿಯೂರಪ್ಪನವರ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ ಅವರ ಮೇಲೆ 700 ಪುಟಗಳ ಚಾರ್ಜ್ ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದರ ಮೇಲೆ ಒಂದು ನಿಲುವನ್ನು ಬಿಜೆಪಿ ಯಾಕೆ ತೆಗೆದುಕೊಳ್ತಿಲ್ಲ? ಎಂದು ಪ್ರಶ್ನಿಸಿದರು.

ಅದೇ ರೀತಿ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ದ ಹೋರಾಡಿದರು, ವಿನೇಶಾ ಪೋಗಟ್, ಸಾಕ್ಷಿ ಮಲ್ಲಿಕ್ ಮೇಲೆ ದಾಳಿ ಆಗಿತ್ತು ಅದಕ್ಕೆ ಕೇಂದ್ರ ಸರ್ಕಾರ ಯಾವ ನಿಲುವನ್ನು ತೆಗೆದುಕೊಳ್ಳಲಿಲ್ಲ ಬಿಜೆಪಿಯನ್ನು ಕೆಲವರು ಬಲಾತ್ಕಾರಿ ಜನತಾ ಪಾರ್ಟಿ ಅಂತಾರೆ, ಆದರೆ ನಾನು ಹಾಗೆ ಹೇಳಲು ಇಷ್ಟ ಪಡುವುದಿಲ್ಲ ಜಾನಿ ಮಾಸ್ಟರ್ ಗೆ ಒಂದು ತೀರ್ಮಾನ ಯಡಿಯೂರಪ್ಪ ವಿಷಯದಲ್ಲಿ ಒಂದು ತೀರ್ಮಾನನಾ? ಎಂದು ಪ್ರಶ್ನಿಸಿದರು.

 

RELATED ARTICLES

Related Articles

TRENDING ARTICLES