ಹರಿಯಾಣದ ವಿಧಾನಸಬೆ ಚುನಾವಣೆಯ ಮತಎಣಿಕೆ ಕಾರ್ಯ ಬಹುತೇಕ ಮುಗಿದಿದ್ದು. ಬಿಜೆಪಿಮ ಮತ್ತೊಮ್ಮೆ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿದೆ. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಕಾರ್ಯಕರ್ತರ ಸಂಬ್ರಮಾಚರಣೆ ಮುಗಿಲು ಮುಟ್ಟಿದ್ದು. ಇಂದು ಸಂಜೆ 7 ಗಂಟೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಶಕದ ಬಳಿಕ ಅಧಿಕಾರಕ್ಕೆ ಬರಲು ಹಂಬಲಿಸುತ್ತಿದ್ದ ಕಾಂಗ್ರೆಸ್ಗೆ ಮತ್ತೇ ನಿರಾಸೆಯಾಗಿದ್ದು. ಮೂರನೇ ಬಾರಿಗೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಚುನಾವಣೋತ್ತರ ಸಮೀಕ್ಷಗಳ ಪ್ರಕಾರ ಈ ಬಾರಿ ಹರಿಯಾಣದಲ್ಲಿ ಸುಲಭ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವರದಿ ನೀಡಲಾಗಿತ್ತು. ಆದರೆ ಚುನಾವಣಾ ಫಲಿತಾಂಶ ಈ ಎಲ್ಲಾ ಸಮೀಕ್ಷೆಗಳ ನಂಬರ್ಗಳನ್ನು ತಲೆಕೆಳಗೆ ಮಾಡಿವೆ.
ಮಧ್ಯಾಹ್ನದ 2 ಗಂಟೆಯ ಹೊತ್ತಿಗೆ ಫಲಿತಾಂಶ ಬಹುತೇಕ ಮುಕ್ತಾಯವಾಗಿದ್ದು ಬಿಜೆಪಿ-50 ಸ್ಥಾನ, ಕಾಂಗ್ರೆಸ-37 ಸ್ಥಾನ, ಜೆಜೆಪಿ- 3 ಸ್ಥಾನಗಳನ್ನು ಪಡೆದಿದ್ದು ಎಎಪಿ- 0 ಸ್ಥಾನಗಳನ್ನು ಪಡೆದಿವೆ. ಭಾರೀ ಕುತೂಹಲ ಮೂಡಿಸಿದ ಫಲಿತಾಂಶ ಹೊರಬಂದಿದ್ದು ಮತ್ತೇ ನಯಾಬ್ ಸಿಂಗ್ ಸೈನಿ ಸಿಎಂ ಸ್ಥಾನ ಅಲಂಕರಿಸಲಿದ್ದರೆ.
ಭಾರೀ ನೀರಿಕ್ಷೆ ಮೂಡಿಸಿದ್ದ ಜುಲಾನ ಕ್ಷೇತ್ರದ ಅಭ್ಯರ್ಥಿ ಕುಸ್ತಿಪಟು ವಿನೀಶ್ ಪೋಗಟ್ 6ಸಾವಿರ ಮತಗಳಿಂದ ಜಯಗಳಿಸಿದ್ದಾರೆ.