Sunday, October 6, 2024

ಶಾಕ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಮನೆ : 5 ಮಂದಿ ಪ್ರಾಣಾಪಾಯದಿಂದ ಪಾರು

ಹಾಸನ : ನಗರದ ಹೊಸಲೈನ್​ ರಸ್ತೆಯ ಮನೆಯೊಂದರಲ್ಲಿ ಶಾಕ್ ಸರ್ಕ್ಯೂಟ್ ಸಂಭವಿಸಿ ಅಗ್ನಿ ಅವಘಡ ಸಂಭವಿಸಿದ್ದು. ಬೆಂಕಿ ಅವಘಡದಿಂದ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಆರು ಮನೆಗಳಿರುವ ಮನೆಯಲ್ಲಿ ಬೆಂಕಿ ಅವಘಡವಾಗಿದ್ದು. ಮುಸ್ತಾಫ ಎಂಬುವವರು ವಾಸಿಸುತ್ತಿದ್ದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಮೊದಲನೇ ಮಹಡಿಯಲ್ಲಿರುವ ಮನೆಯಲ್ಲಿ ಅವಘಡವಾಗಿದ್ದು. ರೆಫ್ರಿಜರೇಟರರ್​ನಲ್ಲಿ ಶಾಕ್ ಸರ್ಕ್ಯೂಟ್ ಸಂಭವಿಸಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡಿದ್ದು, ಕೆಲವೆ ಸಮಯದಲ್ಲಿ ಬೆಂಕಿ ಮನೆಯನ್ನೆಲ್ಲ ಆವರಿಸಿದೆ. ರೆಫ್ರಿಜರೇಟರ್ ಪಕ್ಕದಲ್ಲಿಯೇ ಗ್ಯಾಸ್ ಸಿಲಿಂಡರ್ ಇದ್ದು. ಮನೆ ಹೊತ್ತಿ ಉರಿದರು ಸಿಲಿಂಡರ್ ಸ್ಪೋಟಗೊಂಡಿಲ್ಲ.

ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು. ಅಕ್ಕ ಪಕ್ಕದ ಮನೆಗೆ ಹಾಗುವ ಹಾನಿಯನ್ನು ತಪ್ಪಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳುತ್ತಿದಂತೆ ಮನೆಗಳಿಂದ ಜನರು ಹೊರೆಗೆ ಓಡಿ ಬಂದಿದ್ದು. ಸ್ಥಳಕ್ಕೆ ಹಾಸನ ನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES