Sunday, October 6, 2024

ಪೋಸ್ಟ್ ಆಫೀಸ್​ಗೆ ಬರ್ತಿದೆ ಡ್ರಗ್ಸ್ : ಮಧ್ಯವರ್ತಿಯಾಗಿ ಬಳಸಿಕೊಳ್ಳುತ್ತಿರುವ ಪೆಡ್ಲರ್​ಗಳು

ಬೆಂಗಳೂರು : ನಗರದ ಪೋಸ್ಟ್ ಆಫೀಸಿಗೆ ವಿದೇಶದಿಂದ ಮಾದಕ ವಸ್ತುಗಳು ಬರುತ್ತಿವೆಯ ಎಂಬ ಪ್ರಶ್ನೆ ಈಗ ಉದ್ಬವವಾಗಿದ್ದು ಬೆಂಗಳೂರಿನ ಚಾಮರಾಜಪೇಟೆಯ ಫಾರಿನ್ ಪೋಸ್ಟ್ ಆಫೀಸ್​ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದು. ಕಳೆದ ಅ.01ರಂದು ಸಿಸಿಬಿ ಪೋಲಿಸರು ಪೋಸ್ಟ ಆಫೀಸಿಗೆ ದಾಳಿ ನಡೆಸಿದ್ದ ಸಂಧರ್ಭದಲ್ಲಿ ಸುಮಾರು 626 ಮಾದಕ ವಸ್ತುಗಳು ಪತ್ತೆಯಾಗಿವೆ.

ಖಚಿತ ಮಾಹಿತಿಯ ಮೇರೆಗೆ ಸಿಸಿಬಿಯ ನಾರ್ಕೋಟಿಕ್ಸ್ ವಿಂಗ್, ಶ್ವಾನ ದಳದ ಸಮೇತ ಪೋಸ್ಟ್ ಆಫೀಸಿನ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಕೆಲವು ಪಾರ್ಸಲ್​ಗಳನ್ನು ಕಂಡು ಅನುಮಾನಸ್ಪದವಾಗಿ ಶ್ವಾನಗಳು ವರ್ತಿಸಿದ್ದವು. ಕೂಡಲೇ ಪಾರ್ಸಲ್​ಗಳನ್ನು ವಶಕ್ಕೆ ಪಡೆದು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿತ್ತು.

ಲ್ಯಾಬ್ ಪರೀಕ್ಷೆಯ ನಂತರ ಪಾರ್ಸೆಲ್​ನಲ್ಲಿ ಕೋಕೆನ್,. ಎಂ.ಡಿ.ಎಂ, ಮತ್ತು ಬ್ರೌನ್ ಶುಗರ್ ಸೇರಿದಂತೆ ಅನೇಕ ಮಾದಕ ವಸ್ತುಗಳು ಇರುವುದು ಪತ್ತೆಯಾಗಿದೆ. ಕೊರಿಯರ್ ಮೂಲಕ ವಿದೇಶದಿಂದ ಪಾರ್ಸಲ್​ಗಳನ್ನು ಕಳುಹಿಸುತ್ತಿರುವ ಆರೋಪಿಗಳು ಅಪರಿಚಿತರ ಹೆಸರುಗಳಲ್ಲಿ ಕೊರಿಯರ್ ಕಳುಹಿಸುತ್ತಿದ್ದಾರೆ.

2018 ರಿಂದಲು ಬೆಂಗಳೂರಿಗೆ ಮಾದಕ ವಸ್ತುಗಳು ಬರುತ್ತಿದ್ದು. ಸುಮಾರು 626 ಕೊರಿಯರ್​ಗಳಲ್ಲಿ ಮಾದಕ ವಸ್ತುಗಳು ದೊರೆತಿವೆ. ಕೆಲವೊಂದು ಪಾರ್ಸಲ್​ಳು 2018ರಿಂದಲೂ ಪೋಸ್ಟ್ಆಫೀಸಿನಲ್ಲಿಯೆ ಇವೆ ಇವುಗಳನ್ನು ಪಡೆದಿಲ್ಲ ಎಂಬ ಮಾಹಿತಿ ದೊರೆತಿದೆ. ಕೊನೆಯದಾಗಿ ಸೆ. 09ರಂದು ಪಾರ್ಸಲ್ ಬಂದಿದ್ದು ಸದ್ಯ ಕಮೀಷನರ್ ಅನುಮತಿ ಪಡೆದು ಸಿಸಿಬಿ ಪೋಲಿಸರು ತನಿಖೆ ಮುಂದುವರಿಸಿದ್ದಾರೆ .

 

RELATED ARTICLES

Related Articles

TRENDING ARTICLES