Saturday, October 5, 2024

indigo Airlines ನಲ್ಲಿ ಸರ್ವರ್ ಸಮಸ್ಯೆ : ದೇಶಾದ್ಯಂತ ಪ್ರಯಾಣಿಕರ ಪರದಾಟ

ಬೆಂಗಳೂರು: ದೇಶಾದ್ಯಂತ ಇಂದು (ಅ.05) ಇಂಡಿಗೋ ಏರ್ಲೈನ್ಸ್​ನ ಸರ್ವರ್​ನಲ್ಲಿ ಸಮಸ್ಯೆ ಉಂಟಾಗಿದ್ದು ಇದರಿಂದಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿಯು ಇದೇ ಚಿತ್ರಣವಿದ್ದು ಪ್ರಯಾಣಿಕರು ಪರದಾಡಿದ್ದಾರೆ.

ಸರ್ವರ್ ಸಮಸ್ಯೆಯಿಂದ ದೇಶಾದ್ಯಂತ ವಿಮಾನ ಪ್ರಯಾಣಿಕರು ಚೆಕ್​ಇನ್ ಆಗಲು ಚೆಕ್​ ಔಟ್ ಆಗಲು ಪರದಾಡುವಂತಾಗಿದ್ದು. ಬೆಂಗಳೂರಿನ ಕೆಂಪೇಗೌಡ ಏರ್ಪೋಟ್ ಟರ್ಮಿನಲ್ 1ರಲ್ಲಿಯು ನೂರಾರು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ಪರದಾಡುವಂತಾಯಿತು. ಕೆಲ ವಿಮಾನಗಳನ್ನು ರೀ ಷೇಡ್ಯೂಲ್ ಮಾಡಿಕೊಳಲ್ಲಾಗಿದೆ.

ಇಂದು ಬೆಳಿಗ್ಗೆ 11 ಗಂಟೆಯಿಂದ ಸರ್ವರ್ ಸಮಸ್ಯೆ ಎದುರಾಗಿದ್ದು. ಚೆಕ್ ಇನ್ ಸಮಸ್ಯೆಯಿಂದಾಗಿ ವಿಮಾನಗಳು ಟೇಕ್ ಆಫ್ ಆಗಲು ಸಹ ವಿಳಂಬ ಮಾಡಿದವು. ಸಮಯಕ್ಕೆ ಸರಿಯಾಗಿ ಪ್ರಯಾಣ ಮಾಡಲಾಗದೆ ಪ್ರಯಾಣಿಕರು ಪರದಾಟ ಮಾಡಿದರು.

ಕೆಲ ವಾರಗಳ ಹಿಂದೆ ಮೈಕ್ರೋಸಾಫ್ಟ ಸರ್ವರ್​ಗಳಲ್ಲು ಇಂತಹ ಸಮಸ್ಯೆ ಕಾಣಿಸಿಕೊಂಡು ಇಡೀ ವಿಶ್ವದಾದ್ಯಂತ ಇಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

RELATED ARTICLES

Related Articles

TRENDING ARTICLES