Saturday, October 5, 2024

ಬೆಳಗಾವಿ ಮೇಲಿನ ರಾಜಕೀಯ ಹಿಡಿತ ಕಳೆದುಕೊಂಡ ಕತ್ತಿ ಕುಟುಂಬ

ಬೆಳಗಾವಿ : ಕಳೆದ 9 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ರಮೇಶ್ ಕತ್ತಿ ದಿಢೀರ್ ರಾಜೀನಾಮೆ ನೀಡಿದ್ದು. ಜಿಲ್ಲಾ ರಾಜಕಾರಣದಲ್ಲಿ ಹೊಸದೊಂದು ಕಿಡಿ ಹೊತ್ತಿಕೊಂಡಿದೆ. ಜಿಲ್ಲಾ ನಾಯಕರ ಮುಸುಕಿನ ಗುದ್ದಾಟದಿಂದ ರಮೇಶ ಕತ್ತಿ ರಾಜೀನಾಮೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗಿದ್ದು ಇದರಿಂದಾಗಿ ಬೆಳಗಾವಿ ಜಿಲ್ಲೆಯ ಮೇಲೆ ಕತ್ತಿ ಕುಟುಂಬದ ರಾಜಕೀಯ ಹಿಡಿತ ಸಂಪೂರ್ಣ ಕೈತಪ್ಪಿಹೋಗಿದೆ.

ಅಣ್ಣ ಉಮೇಶ ಕತ್ತಿಯವರ ಅಕಾಲಿಕ ನಿಧನದ ಬಳಿಕ ರಮೇಶ್ ಕತ್ತಿ ರಾಜಕೀಯವಾಗಿ ಅತಂತ್ರವಾಗಿದ್ದು. ಲೋಕಸಭೆ ಚುನಾವಣೆಯಿಂದಲೂ ಕತ್ತಿ ಕುಟುಂಬ ಮತ್ತು ಜೋಲ್ಲೆ ಕುಟುಂಬದ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಉಂಟಾಗಿದೆ. ಚಿಕ್ಕೋಡಿ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಸಿದ್ದ ರಮೇಶ್ ಕತ್ತಿ ಅದನ್ನು ಪಡೆಯುವಲ್ಲಿ ವಿಫಲವಾಗಿದ್ದರು.

ಹೀಗೆ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದ ರಮೇಶ್ ಕತ್ತಿ ಇದೀಗ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಹೊಸ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದು. ರಮೇಶ್ ಕತ್ತಿಯವರು ಸ್ವಇಚ್ಚೆಯಿಂದಲೇ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲೂ ಜಾರಕಿಹೊಳಿ ಕುಟುಂಬದ ಹಿಡಿತ ಮತ್ತಷ್ಟು ಗಟ್ಟಿಯಾಗಿದ್ದು. ಸಂಪೂರ್ಣ ಬೆಳಗಾವಿ ಜಿಲ್ಲೆಯ ಮೇಲೆ ಜಾರಕಿಹೊಳಿ ಕುಟುಂಬದ ಕಂಟ್ರೋಲ್​ಗೆ ಬಂದಂತಾಗಿದೆ.

ಇದರ ನಡುವೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಡಿಸಿಸಿ ಬ್ಯಾಂಕ್​ನ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES