Saturday, October 5, 2024

ಭಾರೀ ಮಳೆಗೆ ಮಣ್ಣಿನಲ್ಲಿ ಸಿಲುಕಿಕೊಂಡ ಮೈನಿಂಗ್ ಲಾರಿಗಳು

ಬಳ್ಳಾರಿ : ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಾತ್ರಿ ಸುರಿದ ಮಳೆಗೆ ಜನಜೀವನ ಅಸ್ಥವ್ಯಸ್ಥವಾಗಿದ್ದು. ಮೈನಿಂಗ್ ಹಬ್ ಆಗಿರುವ ಬಳ್ಳಾರಿಯ ಸಂಡೂರಿನಲ್ಲಿ ಮಳೆಯಿಂದಾಗಿ ಬೃಹತ್ ಪ್ರಮಾಣದ ಹಾನಿಯಾಗಿದ್ದು. ನೂರಾರು ಲಾರಿಗಳು ಮಣ್ಣಿನಲ್ಲಿ ಬಾಗಶಃ ಮುಳುಗಿಡೆಯಾಗಿವೆ.

ಬಳ್ಳಾರಿಯ ವಿವಿಧೆಡೆ ರಾತ್ರಿಯಿಡಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಇದರಿಂದಾಗಿ ಸಂಡೂರು ಬಳಿಯ ಮೈನಿಂಗ್​ಗಳಲ್ಲಿ ನೀರು ನುಗ್ಗಿ ಬೃಹತ್ ಪ್ರಮಾಣದ ಹಾನಿಯಾಗಿದೆ. ಮಳೆ ನೀರು ಮೈನಿಂಗ್ ಪ್ರದೇಶಕ್ಕೆ ನುಗ್ಗಿದ್ದರಿಂದ ನೂರಾರು ಲಾರಿಗಳು ಭಾಗಶಃ ನೀರಿ, ಕೆಸರಿನಲ್ಲಿ ಮುಳುಗಡೆಯಾಗಿವೆ.

ಇಡೀ ರಾತ್ರಿ ಸುರಿದ ಮಳೆಯಿಂದಾಗಿ ಡ್ರೈವರ್​ಗಳು ಪರದಾಡಿದ್ದು. ಸಂಡೂರಿನ ನಂದಿಹಳ್ಳಿ ವಾಶಿಂಗ್ ಪ್ಲಾಂಟ್ ಬಳಿ ಮಳೆ ಅವಾಂತರಕ್ಕೆ ಡ್ರೈವರ್​ಗಳು ನಲುಗಿದ್ದಾರೆ. ಬಳ್ಳಾರಿಯಲ್ಲಿ ಒಂದೇ ದಿನ ರಾತ್ರಿ 123 ಮಿ.ಮೀ ಮಳೆ ಸುರಿದಿದೆ.

 

RELATED ARTICLES

Related Articles

TRENDING ARTICLES