Saturday, October 5, 2024

ರಾಜ್ಯದಲ್ಲಿ ಮಳೆ ಆರ್ಭಟ : ಜಿಲ್ಲಾವಾರು ಮಳೆ ಪ್ರಮಾಣದ ಪಟ್ಟಿಯ ವರದಿ.

ಬೆಂಗಳೂರು : ರಾಜ್ಯದ ಹಲವೆಡೆ ನಿನ್ನೆ ಭಾರಿ ಮಳೆಯಾಗಿದ್ದು. ನೆನ್ನೆ ಸಂಜೆ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ಥವಾಗಿದೆ. ಗಾಳಿ ಸಹಿತ ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿವೆ. ಮೈಸೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದು. 122.5 ಮಿ.ಮೀ ಮಳೆಯಾದರೆ. ಗಣಿನಾಡು ಬಳ್ಳಾರಿಯಲ್ಲಿಯು 121.5 ಮಿ.ಮೀ ಮಳೆಯಾಗಿದೆ. ಬೀದರ್​ನಲ್ಲಿ ಅತಿ ಕಡಿಮೆ ಮಳೆಯಾಗಿದ್ದು 27.5 ಮಿ.ಮೀ ಮಳೆಯಾಗಿದೆ.

ಬಯಲು ಸೀಮೆಯಾದ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿಯು ಅತಿ ಹೆಚ್ಚು ಮಳೆ ಸುರಿದಿದ್ದು ಎಲ್ಲೆಲ್ಲಿ ಎಷ್ಟು ಪ್ರಮಾಣದ ಮಳೆಯಾಗಿದೆ ಎಂಬ ಪಟ್ಟಿ ಈ ಕೆಳಗೆ ನೀಡಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬಿದ್ದ ಸ್ಥಳ

ಮೈಸೂರು ಜಿಲ್ಲೆಯ ಕಿರಗಸೂರಿನಲ್ಲಿ 122.5 ಮಿಮೀ ಮಳೆ ದಾಖಲು

ಬಳ್ಳಾರಿ ಜಿಲ್ಲೆಯ ಯಶವಂತನಗರದಲ್ಲಿ 121.5 ಮಿಮೀ ಮಳೆ ದಾಖಲು

ದಾವಣಗೆರೆ ಜಿಲ್ಲೆಯ ಅಣಬೂರಿನಲ್ಲಿ 117.5 ಮಿಮೀ ಮಳೆ ದಾಖಲಾಗಿದೆ

ಚಿತ್ರದುರ್ಗ ಜಿಲ್ಲೆಯ ನೇರಲಗುಂಟೆಯಲ್ಲಿ 113.0 ಮಿಮೀ ಮಳೆ ದಾಖಲಾಗಿದೆ

ತುಮಕೂರು ಜಿಲ್ಲೆಯ ತಡಕಲೂರಿನಲ್ಲಿ 112.0 ಮಿಮೀ ಮಳೆ ದಾಖಲಾಗಿದೆ

 

ಜಿಲ್ಲಾವಾರು ಮಳೆ ಪ್ರಮಾಣ

ಮೈಸೂರು: 122.5ಮಿ.ಮೀ

ಬಳ್ಳಾರಿ: 121.5ಮಿ.ಮೀ

ದಾವಣಗೆರೆ: 117.5ಮಿ.ಮೀ

ಚಿತ್ರದುರ್ಗ: 113ಮಿ.ಮೀ

ತುಮಕೂರು: 112ಮಿ.ಮೀ

ವಿಜಯನಗರ: 110.5ಮಿ.ಮೀ

ಕೋಲಾರ: 96ಮಿ.ಮೀ

ರಾಯಚೂರು: 87.5ಮಿ.ಮೀ

ಯಾದಗಿರಿ: 83.5ಮಿ.ಮೀ

ಚಿಕ್ಕಮಗಳೂರು: 78ಮಿ.ಮೀ

ರಾಮನಗರ: 77ಮಿ.ಮೀy

ಉಡುಪಿ: 70ಮಿ.ಮೀ

ಕಲಬುರಗಿ: 69ಮಿ.ಮೀ

ಕೊಪ್ಪಳ: 67.5ಮಿ.ಮೀ

ದಕ್ಷಿಣ ಕನ್ನಡ: 67ಮಿ.ಮೀ

ಚಾಮರಾಜನಗರ: 66ಮಿ.ಮೀ

ಹಾಸನ: 58.5ಮಿ.ಮೀ

ಮಂಡ್ಯ: 58.5ಮಿ.ಮೀ

ಕೊಡಗು: 57.5ಮಿ.ಮೀ

ಬೆಂಗಳೂರು ನಗರ: 55ಮಿ.ಮೀ

ಚಿಕ್ಕಬಳ್ಳಾಪುರ: 52ಮಿ.ಮೀ

ಧಾರವಾಡ: 42ಮಿ.ಮೀ

ಉತ್ತರ ಕನ್ನಡ: 41.5ಮಿ.ಮೀ

ಬೆಂಗಳೂರು ಗ್ರಾಮಾಂತರ: 38.5ಮಿ.ಮೀ

ವಿಜಯಪುರ: 33ಮಿ.ಮೀ

ಬೆಳಗಾವಿ: 32.5ಮಿ.ಮೀ

ಬೀದರ್: 27.5ಮಿ.ಮೀ

RELATED ARTICLES

Related Articles

TRENDING ARTICLES