Saturday, October 5, 2024

ಹರಿಯಾಣ ವಿಧಾನಸಭ ಚುನಾವಣೆ : ಅ.08 ರಂದು ಮತ ಎಣಿಕೆ

ಹರಿಯಾಣದ 90 ವಿಧಾನಸಭ ಕ್ಷೇತ್ರಗಳಿಗೆ ಇಂದು (ಅ.05) ಚುನಾವಣೆ ನಡೆಯುತ್ತಿದ್ದು. ಬೆಳಿಗ್ಗೆಯಿಂದಲೆ ಮತದಾನ ಪ್ರಕ್ರಿಯೆ ಚುರುಕು ಪಡೆದಿದೆ. 90 ಸದಸ್ಯ ಬಲ ಹೊಂದಿರುವ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 1031 ಮಂದಿ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಒಟ್ಟು 2,03,54,350 ಮತದಾರರನ್ನು ಹೊಂದಿದ್ದು. ಮತದಾನಕ್ಕಾಗಿ ಇಡೀ ರಾಜ್ಯಾದ್ಯಂತ 20,632 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. 1031 ಮಂದಿ ಅಭ್ಯರ್ಥಿಗಳಲ್ಲಿ 101 ಮಂದಿ ಮಹಿಳೆಯರು ಚುನಾವಣ ಕಣದಲ್ಲಿದ್ದಾರೆ.

ಸಿಎಂ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್’ನ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಸ್ತಿಪಟು ವಿನೇಶ್ ಫೋಗಟ್, ಬಿಜೆಪಿಯ ದುಶ್ಯಂತ್ ಚೌಟಾಲಾ ಸೇರಿದಂತೆ ಹಲವು ಘಟಾನುಘಟಿಗಳು ಚುನಾವಣ ಕಣದಲ್ಲಿದ್ದಾರೆ. ಆಡಳಿತರೂಡ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು. ದಶಕದ ನಂತರ ಅಧಿಕಾರ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.

ಚುನಾವಣ ಕಣದಲ್ಲಿ ಬಿಜೆಪಿ, ಕಾಂಗ್ರೆಸ್ ಎಎಪಿ , ಐಎನ್ಎಲ್’ಡಿ-ಬಿಎಸ್’ಪಿ ಮತ್ತು ಜೆಜೆಪಿ-ಆಜಾದ್ ಸಮಾಜ ಪಕ್ಷ ಕಣದಲ್ಲಿರುವ ಪ್ರಮುಖ ರಾಜಕೀಯ ಪಕ್ಷಗಳಾಗಿವೆ. ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದ್ದು. ಹರಿಯಾಣದ ಗದ್ದುಗೆ ಯಾರಿಗೆ ಸಿಗಲಿದೆ ಎಂದು ಕುತೂಹಲ ಮೂಡಿದೆ.

 

RELATED ARTICLES

Related Articles

TRENDING ARTICLES