Saturday, October 5, 2024

ಕನ್ನಡ ನಾಡಿನಲ್ಲಿ ಜೀವನ ನಡೆಸುವವರು ಕನ್ನಡ ಕಲಿಯಬೇಕಲ್ವೇ? ಎಂದು ಪ್ರಶ್ನಿಸಿದ ಸಿಎಂ

ರಾಯಚೂರಿ: ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಗೋಕಾಕ್ ಚಳುವಳಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು. ಕಾರ್ಯಕ್ರಮದಲ್ಲಿ ಎಲ್ಲರೂ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದಾರೆ. ನಾನು ಸಹ ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ರಾಯಚೂರು ಗಡಿ ಆಂಧ್ರ ತೆಲಂಗಾಣ  ಭಾಗದಲ್ಲಿರುವುದರಿಂದ ಇಲ್ಲಿ ತೆಲುಗು ಭಾಷೆಯ ಪ್ರಭಾವವಿದೆ. ಹೈದ್ರಾಬಾದ್ ನಿಜಾಮರ ಆಳ್ವಿಕೆಯಿಂದ ಉರ್ದು ಭಾಷೆ ಪ್ರಭಾವವವೂ ಇದೆ. ಆದರೆ ಕರ್ನಾಟಕ ಏಕೀಕರಣ ಆದ ಮೇಲೆ ಬೇರೆ ಬೇರೆ ರಾಜ್ಯದಲ್ಲಿ ಸೇರಿದ್ದ ಕನ್ನಡ ಮಾತನಾಡುವ ಜನ ರಾಜ್ಯಕ್ಕೆ ಸೇರಬೇಕು ಅಂತ ಹೋರಾಟ ನಡೆಯಿತು. ಇದರಿಂದಗಿ ಈ ಪ್ರದೇಶಗಳೂ ಕರ್ನಾಟಕ್ಕೆ ಸೇರಿವೆ ಎಂದರು.

ಹೀಗೆ ಏಕೀಕರಣವಾದ ನಂತರ ಮೈಸೂರು ರಾಜ್ಯವನ್ನು 1973 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಎಂದು ಮರುನಾಮಕಾರಣ ಮಾಡಲಾಯಿತು. ಹೀಗೆ ಕರ್ನಾಟಕ ಅಂತ ನಾಮಕರಣ ಮಾಡಿ 50 ವರ್ಷ ಅಗಿದೆ. ಇದನ್ನ ಇಡೀ ವರ್ಷ ಆಚರಣೆ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಮೈಸೂರು ಭಾಗ, ಮಂಗಳೂರು ಭಾಗದಲ್ಲೂ ಸಭೆ ಮಾಡಿದ್ದಾರೆ. ಅದೇ ರೀತಿ ರಾಯಚೂರು ಭಾಗದಲ್ಲೂ ಮಾಡುತ್ತಿದ್ದೇವೆ. ಈ ಭಾರಿಯ ಘೋಷ ವಾಕ್ಯ ಕರ್ನಾಟಕ ಹೆಸರಾಯಿತು ಕನ್ನಡ ಉಸಿರಾಗಲಿ ಎಂಬುದಾಗಿದೆ. ಇದುನಮ್ಮ ನಿಮ್ಮೆಲ್ಲರ ಉಸಿರು ಆಗಿದೆ ಎಂದರು.

ನಂತರ ಗೋಕಾಕ್ ಚಳುವಳಿಯ ಬಗ್ಗೆ ಮಾತನಾಡಿದ ಸಿಎಂ ಕನ್ನಡ ಭಾಷೆಯ ರಕ್ಷಣೆಗಾಗಿ ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿಯನ್ನು ರಚಿಸಲಾಯಿತು. ನಾನೇ ಅದರ ಮೊದಲ ಅಧ್ಯಕ್ಷನಾಗಿದ್ದೆ. ಅಂದಿನ ಸಿಎಂ ರಾಮಕೃಷ್ಣ ಹೆಗ್ಡೆಯವರು ಮೊದಲ ಬಾರಿ ಗೆದ್ದಿದ್ದ ನನ್ನನ್ನು ಕರೆದು ಅದರ ಅಧ್ಯಕ್ಷನಾಗಿ ಮಾಡಿದರು. ನಾನು ಸಾಹಿತಿಯಲ್ಲ, ಕನ್ನಡದಲ್ಲಿ ಎಂಎ ಮಾಡಿಲ್ಲ ಎಂದು ಹೇಳಿದರು. ನೀವೆ ಆಗಬೇಕು ಎಂದು ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದರು.

ಮಾತೃ ಭಾಷೆಯನ್ನು ಕಾಪಾಡಲು ಯಾವ ರಾಜ್ಯದಲ್ಲಿಯು ಕಾವಲು ಸಮಿತಿಯಿಲ್ಲ ಆದರೆ ಕರ್ನಾಟಕದಲ್ಲಿ ಕನ್ನಡವನ್ನುಕಾಪಾಡಲು ಸಮಿತಿ ಇದೆ. ಈಗ ಅದೇ ಪ್ರಾದಿಕಾರವಾಗಿದೆ ಎಂದರು. ಮುಂದುವರಿದು ಮಾತನಾಡಿದ ಸಿಎಂ ನಾನು ಅಂದು ಕನ್ನಡದಲ್ಲಿ ಕಡತಗಳಿಗೆ ಸಹಿ ಮಾಡಲು ಶುರು ಮಾಡಿದೆ, ಇಂದು ಸಹ ಕನ್ನಡದಲ್ಲಿಯೇ ಸಹಿ ಮಾಡುತ್ತಿದ್ದೇನೆ ಎಂದು ಹೇಳಿದರು. ಟಿಪ್ಪಣಿಗಳನ್ನು ಕನ್ನಡದಲ್ಲಿ ಬರೆಯುತ್ತೇನೆ ಎಂದರು., ಇಂಗ್ಲೀಷ್ ಕಲಿಯುವುದು ಬೇಡ ಎಂದು ಹೇಳುವುದಿಲ್ಲ ಆದರೆ ಕನ್ನಡ ಭಾಷೆಯು ಯಾವಾಗಲು ಅಗ್ರ ಭಾಷೆಯಾಗಿರಬೇಕು ಎಂದು ಹೇಳಿದರು.

ಗೋಕಾಕ್ ಚಳುವಳಿಗೆ ವೇಗ ಸಿಕ್ಕಿದ್ದು ಡಾ. ರಾಜ್ ಕುಮಾರ್ ಅವರು ಹೋರಾಟಕ್ಕೆ ಇಳಿದ ಮೇಲೆ. ಇದೊಂದು ಐತಿಹಾಸಿಕ ಚಳುವಳಿಯಾಗಿದೆ. ಇದನ್ನು ಗೋಕಾಕ್ ಚಳುವಳಿ ಎನ್ನುವುದಕ್ಕಿಂತ ಕನ್ನಡ ಭಾಷ ಚಳುವಳಿ ಎಂದು ಕರೆದರೆ ಉತ್ತಮ ಎಂದರು.

ಅನ್ಯ ಭಾಷಿಕರ ಬಗ್ಗೆ ಮಾತನಾಡಿದ ಸಿಎಂ ಅನ್ಯ ಭಾಷಿಕರು ಅವರು ಸಿಕ್ರೆ ಅವರ ಭಾಷೆಯಲ್ಲಿ ಮಾತನಾಡುವಷ್ಟು ಉದಾರವಾಗಬೇಡಿ. ಆದಷ್ಟು ನಮ್ಮ ಭಾಷೆಯಲ್ಲಿಯೆ ಮಾತಾನಾಡಿ ಬೇರೆಯವರಿಗೆ ಕನ್ನಡ ಭಾಷೆಯನ್ನು ಕಲಿಸಿ. ಕನ್ನಡನಾಡಿನಲ್ಲಿ ಜೀವನ ನಡೆಸುವವರು ಕನ್ನಡ ಭಾಷೆ ಕಲಿಯಬೇಕಲ್ವಾ? ಎಂದು ಪ್ರಶ್ನಿಸಿದರು.

ವಿಧಾನಸೌದದ ಮುಂದೆ ನವೆಂವರ್ 01ರಂದು ಕರ್ನಾಟಕ ಮಾತೆ ಭುವನೇಶ್ವರಿಯ ಪ್ರತಿಮೆಯನ್ನು ಸ್ಥಾಪಿಸುತ್ತೇವೆ. ಯಾವುದೇ ಕಾರಣಕ್ಕೂ ತಡವಾಗದೆ ಆದಷ್ಟು ಬೇಗ ಪ್ರತಿಮೆಯನ್ನು ಸಿದ್ಧಪಡಿಸಲು ಶಿವರಾಜ್ ತಂಗಡಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

 

RELATED ARTICLES

Related Articles

TRENDING ARTICLES