Saturday, October 5, 2024

ಇರಾನ್ X ಇಸ್ರೇಲ್ ಯುದ್ದ: ಜಗತ್ತಿಗೆ ಆರ್ಥಿಕ ಸಂಕಷ್ಟ!..

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ದ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಅ 01ರಂದು ಇಸ್ರೇಲ್​ನ ಮಿಲಿಟರಿ ಬೇಸ್ ಮತ್ತು ಮೊಸಾದ್ ಕಚೇರಿಯನ್ನು ಗುರಿಯಾಗಿಸಿಕೊಂಡು ಇರಾನ್ ಮಾಡಿದ ದಾಳಿಯಿಂದ ವ್ಯಘ್ರವಾಗಿರುವ ಇಸ್ರೇಲ್ ಯಾವುದೇ ಕ್ಷಣದಲ್ಲಿ ಇರಾನ್ ಮೇಲೆ ದಾಳಿಮಾಡಬಹುದು ಎಂದು ಊಹಿಸಲಾಗುತ್ತಿದೆ.

ಇಸ್ರೇಲ್ ಮೇಲೆ ಆಗಿರುವ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಇಸ್ರೇಲ್ ಒಳಗೆ ಕೂಗು ಹೆಚ್ಚಾಗಿದ್ದು. ಇಸ್ರೇಲ್​ನ ಪ್ರತಿಪಕ್ಷಗಳು ಆಡಳಿತ ಪಕ್ಷದ ಮೇಲೆ ಒತ್ತಡ ಹೇರುತ್ತಿವೆ. ಇದರ ನಡುವೆ ಇಸ್ರೇಲ್ ಸೇನೆಯ ಚೀಫ್ ಕಮಾಂಡರ್ (Herzi Halevi) ದಾಳಿ ಮಾಡಲು ನಾವು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು. ಯಾವಾಗ ದಾಳಿ ಮಾಡಬೇಕೆಂದು ನಾವು ತಿರ್ಮಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಇರಾನ್ ಅಣು ಸ್ಥಾವರವನ್ನು ನಾಶ ಮಾಡುತ್ತ ಇಸ್ರೇಲ್ ? 

ಇಸ್ರೇಲ್ ಅನೇಕ ವರ್ಷಗಳಿಂದ ಇರಾನಿನ ಅಣು ಶಕ್ತಿ ಯೋಜನೆಗಳನ್ನು ವಿಫಲಗೊಳಿಸುತ್ತ ಬಂದಿದ್ದು. ಅನೇಕ ಅಣು ವಿಜ್ಞಾನಿಗಳನ್ನು ಹತ್ಯೆ ಮಾಡಿದೆ. ಆದರೆ ಇತ್ತೀಚೆಗೆ ಇರಾನ್ ಅಣ್ವಸ್ತ್ರವನ್ನು ಪಡೆದಿದೆ ಎಂದು ಅಮೇರಿಕದ ಪತ್ರಿಕೆಗಳು ವರದಿ ಮಾಡಿದೆ. ಆದ್ದರಿಂದ ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಇರಾನಿನ ಅಣ್ವಸ್ತ್ರ ಯೋಜನೆಯನ್ನು ವಿಫಲಗೊಳಿಸಬೇಕು ಎಂದು ಇಸ್ರೇಲ್ ಯೋಜನೆ ರೂಪಿಸಿದೆ ಎಂದು ಅಂತರ್​ರಾಷ್ಟ್ರೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಇದನ್ನು ಹೊರತುಪಡಿಸಿ ಇರಾನಿನ ಆದಾಯದ ಮೂಲವಾಗಿರುವ ತೈಲ ಬಾವಿಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಹುದು ಅಥವಾ ಇರಾನಿನ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಬಹುದು  ಎಂದು ಸಹ ವಿಶ್ಲೇಷಿಸಲಾಗಿದೆ.

ಭಾರತಕ್ಕೆ ತಲೆನೋವಾದ ಯುದ್ದ

ಈ ಯುದ್ದದಲ್ಲಿ ಭಾರತ ಯಾರ ಪರವಾಗಿಯು ನಿಲುವು ತೆಗೆದುಕೊಳ್ಳದೆ ತಟಸ್ಥವಾಗಿದೆ. ಆದರೂ ಈ ಯುದ್ದದಿಂದ ಭಾರತ ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತವು ಇರಾನಿನಿಂದ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳದಿದ್ದರು ಸಹ ಅಲ್ಪ ಪ್ರಮಾಣದಲ್ಲಿ ತೈಲವನ್ನು ತರಿಸಿಕೊಳ್ಳುತ್ತದೆ.  ಆದರೆ ಇರಾನಿನಲ್ಲಿ ಉತ್ಪಾದಿಸುವ ಬಹುಪಾಲು ತೈಲವನ್ನು ಚೀನಾ ಖರೀದಿಸುವುದರಿಂದ ಇರಾನ್ ಯುದ್ದ ಮಾಡಲು ನಿಂತರೆ ಚೀನಾ ಬೇರೆ ರಾಷ್ಟಗಳ ಬಳಿಯಿಂದ ತೈಲ ತೆಗೆದುಕೊಳ್ಳುತ್ತದೆ ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆಯು ಹೆಚ್ಚಾಗುತ್ತದೆ. ಆಗ ಭಾರತದಲ್ಲಿಯು ತೈಲದ ಬೆಲೆ ಹೆಚ್ಚಾಗುತ್ತದೆ.

ಇರಾನ್ ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿದ್ದು ಏಷ್ಯಾದ ರಾಷ್ಟ್ರಗಳು ಪಶ್ಚಿಮದ ರಾಷ್ಟ್ರಗಳೊಂದಿಗೆ ವ್ಯವಹಾರ ಮಾಡಲು ಇರಾನಿನ ಜಲಗಡಿಯನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಈ ಭಾಗದಲ್ಲಿ ಯುದ್ದವಾದರೆ ಅರ್ಧದಷ್ಟು ವ್ಯಾಪಾರ ವ್ಯವಹಾರಗಳು ನಿಂತು ಹೋಗುತ್ತವೆ. ಇದು ಸಹ ಜಗತ್ತಿನ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು ಕೊಡುತ್ತದೆ.

ನೇರ ಯುದ್ದದಲ್ಲಿ ಕೇವಲ ಎರಡು ರಾಷ್ಟ್ರಗಳು ಭಾಗಿಯಾದರು ಸಹ. ಆ ಯುದ್ದದ ಪರಿಣಾಮವನ್ನು ಇಡೀ ಜಗತ್ತು ಅನುಭವಿಸುತ್ತದೆ ಎಂಬುದು ಇಂದಿನ ಜಾಗತೀಕರಣದ ಸತ್ಯವಾಗಿದೆ ಎಂದು ಎಲ್ಲಾ ರಾಷ್ಟ್ರಗಳು ಅರಿಯುವುದರಲ್ಲಿಯೇ ಜಾಗತಿಕ ಶಾಂತಿ ಅಡಗಿದೆ…

 

 

RELATED ARTICLES

Related Articles

TRENDING ARTICLES