ಬೆಂಗಳೂರು : ವಿವಿಧ ಬೇಡಿಕೆಗಳಗೆ ಆಗ್ರಹಿಸಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಸಿಬ್ಬಂದಿಗಳು ಅನಿರ್ದಿಷ್ಟವದಿ ಹೋರಾಟ ಕೈಗೊಂಡಿದ್ದು ಇಂದಿನಿಂದ (ಅ.04) ಗ್ರಾಮಪಂಚಾಯಿತಿಯ ಎಲ್ಲಾ ಸೇವೆಗಳು ಸ್ಥಗಿತವಾಗಲಿದೆ.
ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿಯಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ ಕೈಗೊಂಡಿರುವ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿಯ ಎಲ್ಲಾ ಗ್ರೇಡ್ನ ಸಿಬ್ಬಂದಿಗಳು ಹೋರಾಟ ಕೈಗೊಂಡಿದ್ದು. ಪಿಡಿಓ, ಕಾರ್ಯದರ್ಶಿ ಗ್ರೇಡ್ 1ಮತ್ತುಗ್ರೇಡ್2ನೌಕರರು, ಲೆಕ್ಕ ಸಹಾಯಕರು, ಕರ ವಸೂಲಿ ಸಿಬ್ಬಂದಿ, ಡಾಟಾ ಎಂಟ್ರಿ ಆಪರೇಟರ್ ಸೇರಿ ಎಲ್ಲ ಸಿಬ್ಬಂದಿ ಧರಣಿ ನಿರತರಾಗಿದ್ದಾರೆ.
ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧ್ಯಕ್ಷರು ಕೂಡ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು. ಬೇರೆ ತಾಲೂಕಿಗೆ ವರ್ಗಾವಣೆಗೆ ವಿರೋಧ, ಪಿಡಿಓಗಳನ್ನು ಗೆಜೆಟೆಡ್ ಬಿ ದರ್ಜೆಗೆ ಆಗ್ರಹ ಜೇಷ್ಠತಾಪಟ್ಟಿ ಹಾಗೂ ಬಡ್ತಿ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯ. ಈ ರೀತಿಯ ಹಲವಾರು ಬೇಡಿಕೆ ಈಡೇರಿಸುವಂತೆ ಕೋರಿ ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಇಳಿದಿದ್ದಾರೆ.