Saturday, October 5, 2024

ರಾಜಧಾನಿ ಜನರ ಹೊಟ್ಟೆ ಸೇರುತ್ತಿದೆ ಕೊಳಚೆ ನೀರು, ಮಾನವ ಮೂತ್ರ ಮಿಶ್ರಿತ ಸೊಪ್ಪು

ಬೆಂಗಳೂರು : ನಗರದ ಜನರಿಗೆ ಇದೊಂದು ಎಚ್ಚರಿಕೆಯ ಸುದ್ದಿ. ರಾಜಧಾನಿಯ ಜನರ ಹೊಟ್ಟೆ ಸೇರುತ್ತಿದೆ ಮನುಷ್ಯರ ಮೂತ್ರ ಮತ್ತು ಕೊಳಚೆ ನೀರು ಮಿಶ್ರಿತ ಸೊಪ್ಪು. ಹೌದು, ಗಾಬರಿಯಾದರು ಇದು ಸತ್ಯ ಪ್ರತಿನಿತ್ಯ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ ಲೋಡ್​ಗಟ್ಟಲೆ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪು ಬರುತ್ತಿದ್ದು ಇದನ್ನು ಅತಿ ಕೆಟ್ಟ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.

ಪ್ರತಿನಿತ್ಯ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ ನೂರಾರು ಲೋಡ್​ನಷ್ಟು ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪು ಬರುತ್ತಿದ್ದು. ಈ ಸೊಪ್ಪನ್ನು ಕೆ.ಆರ್ ಮಾರುಕಟ್ಟೆಯ ಚರಂಡಿ, ಪುಟ್​ಬಾತ್, ರೋಡ್​ನ  ಮೇಲೆ ಸುರಿಯುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಜನರು ಚಪ್ಪಲಿ ಕಾಲಿನಲ್ಲಿಯೆ ಸೊಪ್ಪನ್ನು ತುಳಿಯುತ್ತ ಒಡಾಡುತ್ತಾರೆ.

ಸೊಪ್ಪು ಸುರಿಯುವ ಮುನ್ನ ಕೆಳಗೆ ಪ್ಲಾಸ್ಟಿಕ್ ಶೀಟ್​ನ್ನು ಕೂಡ ಹಾಕದೆ ನೆಲದ ಮೇಲೆಯೆ ಸುರಿಯುತ್ತಿದ್ದು. ಜನರು ಓಡಾಡಲು ಅಸಯ್ಯ ಪಡುವ ಜಾಗದಲ್ಲೆಲ್ಲ ಸೊಪ್ಪನ್ನು ಸುರಿಯುತ್ತಿದ್ದಾರೆ. ಈ ಸೊಪ್ಪು ಬೆಂಗಳೂರಿನ ಮನೆಮನೆಗು ತಲುಪುತ್ತಿದೆ. ಆದರೂ ಸಹ ಆಹಾರ ಸುರಕ್ಷತಾ ಅಧಿಕಾರಿಗಳು ಇದರ ಕಡೆಗೆ ಯಾವುದೇ ಗಮನ ನೀಡುದೆ ಕಣ್ಮುಚ್ಚಿ ಕುಳಿತಿದ್ದಾರೆ.

 

RELATED ARTICLES

Related Articles

TRENDING ARTICLES