Saturday, October 5, 2024

ಬೆಂಗಳೂರಿನ ಕಾಲೇಜುಗಳಿಗೆ ಬಾಂಬ್ ಬೆದರಿಕೆ: ಪೋಷಕರಿಗೆ ಆತಂಕ

ಬೆಂಗಳೂರು : ನಗರದ ಪ್ರತಿಷ್ಟಿತ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಬಂದಿದ್ದು. BMS, BIT ಮತ್ತು M.S ರಾಮಯ್ಯ ಕಾಲೇಜಿಗೆ ಇಂದು ಮಧ್ಯಾಹ್ನ ಈ – ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ.

ಬಾಂಬ್ ದಾಳಿಯ ಬೆದರಿಕೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿಗಳು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಎಂ.ಎಸ್ ರಾಮಯ್ಯ ಕಾಲೇಜು ಸದಾಶಿವನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿದೆ, BMs ಕಾಲೇಜು ಹನುಮಂತನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ bit ಕಾಲೇಜು ಬಸವನಗುಡಿ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರಿವೆ. ಘಟನಾ ಸ್ಥಳದಲ್ಲಿ ಪೋಲಿಸರು ಮತ್ತು ಬಾಂಬ್ ನಿಷ್ಕ್ರಯ ದಳದಿಂದ ಪರಿಶೀಲನೆ ಮಾಡಲಾಗುತ್ತಿದೆ.

ಕೆಲವೇ ದಿನಗಳ ಹಿಂದೆ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್​ಗಳಾಧ ತಾಜ್ ವೆಸ್ಟ್ ಎಂಡ್ ಹೋಟೆಲಿಗು ಇಂತಹ ಬಾಂಬ್ ಬೆದರಿಕೆ ಹಾಕಲಾಗಿತ್ತು. ಅಂದು ಸಹ ಸ್ಥಳಕ್ಕೆ ಧಾವಿಸಿದ ಬಾಂಬ್ ಸ್ಕ್ವಾಡ್ ಹೋಟೆಲ್​ನ್ನು ಪರಿಶೀಲಿಸಿ ಯಾವುದೇ ಬಾಂಬ್ ಇಲ್ಲ ಎಂದು ಖಚಿತಪಡಿಸಿತ್ತು.

 

RELATED ARTICLES

Related Articles

TRENDING ARTICLES