Sunday, October 6, 2024

ದರ್ಶನ್ ರಾಜಾತಿಥ್ಯ ಪ್ರಕರಣ : ಎಣ್ಣೆ ಸಪ್ಲೈ ಮೂಲದ ಹಿಂದೆ ಬಿದ್ದ ತನಿಖಾಧಿಕಾರಿಗಳು

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ನೀಡಿದ ಪ್ರಕರಣದಲ್ಲಿ ತನಿಖಾಧಿಕಾರಿಗಳು ತನಿಖೆ ತಡೆಸುತ್ತಿದ್ದು. ಎಣ್ಣೆ ಬಾಟೆಲ್​ಗೆ ಎರಡ್ಮೂರು ಸಾವಿರವಾದರೆ. ಅದನ್ನು ಜೈಲಿನೊಳಗೆ ಸಾಗಿಸಲು 25 ಸಾವಿರ ಹಣ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ದೊರೆತಿದೆ.

ತನಿಖಾಧಿಕಾರಿಗಳ ತನಿಖೆ ವೇಳೆ ಜೈಲಾಧಿಕಾರಿಗಳ ಒಂದೊಂದೆ ಕಳ್ಳಾಟಗಳು ಬಯಲಾಗಿವೆ. ಜೈಲಿನೊಳಗೆ ಊಟ, ಮೊಬೈಲ್ ಸೇರಿದಂತೆ ಡಿಂಕ್ಸ್ ಕೂಡ ಸಪ್ಲೈಯಾಗುತ್ತಿದ್ದು ಅವುಗಳ ಬಗ್ಗೆ ಬಹುತೇಕ ತನಿಖೆ ಮುಗಿಸಿರು ಪೋಲಿಸರು ಇನ್ನೇನು ಕೆಲವೆ ದಿನಗಳಲ್ಲಿ ಚಾರ್ಜಶೀಟ್ ಸಲ್ಲಿಕೆ ಮಾಡಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಮೂರು ಹಂತದಲ್ಲಿ ಸಪ್ಲೈ ಆಗುತ್ತಂತೆ ಎಣ್ಣೆ ಬಾಟಲ್.

ಜೈಲಿನೊಳಗೆ ಎಣ್ಣೆ ಸಪ್ಲೈ ಮಾಡಲು ವ್ಯವಸ್ಥಿತವಾದ ಜಾಲವನ್ನು ರಚಿಸಿಕೊಂಡಿರುವ ಪೋಲಿಸರು. ಮೂರು ಹಂತದಲ್ಲಿ ಜೈಲಿನೊಳಗಡೆ ಎಣ್ಣೆ ಸಪ್ಲೈ ಮಾಡುತ್ತಾರೆ. ಮೊದಲಿಗೆ ಬಾಟಲ್ ತಂದು ಕೊಡೋನು ಒಬ್ಬನಾದರೆ. ಅದನ್ನು ಗೇಟ್ ಒಳಗೆ ತಂದು ಕೊಡುವವರು ಮತ್ತೊಬ್ಬರಿದ್ದಾರೆ . ಗೇಟ್ ಒಳಗೆ ಬಂದ ಬಾಟೆಲನ್ನು ರೌಡಿ ಶೀಟರ್​ಗಳಿಗೆ ತಲುಪಿಸುವವರು ಬೇರೆಯವರಾಗಿರುತ್ತಾರೆ . ಎಣ್ಣೆ ಸಪ್ಲೈ ಮಾಡುತ್ತಿದ್ದವರನ್ನು ಅಧಿಕಾರಿಗಳು ಮಾತನಾಡಿಸುತ್ತಿರಲಿಲ್ಲ ಎಂಬ ಮಾಹಿತಿ ದೊರೆತಿದೆ.

ಈ ಕೆಲಸಗಳನ್ನು ಮಾಡಲು ಕೆಲವು ಜೈಲು ಸಿಬ್ಬಂದಿಗಳು ಮತ್ತುಸಜಾ ಕೈದಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹಣ ನೀಡುವ ಮತ್ತು ಹಣ ಪಡೆಯುವ ಎಲ್ಲಾ ಪ್ರಕ್ರಿಯೆಗಳು ಹೊರಗೆ ನಡೆಯುತ್ತಿದ್ದವು ಎಂಬ ಮಾಹಿತಿ ದೊರೆತಿದೆ.

ಯಾರ್ಯಾರು ಎಣ್ಣೆ ತಂದು ಕೊಡುತ್ತಿದ್ದರು ಎಂಬುದರ ಹಿಂದೆ ಬಿದ್ದಿರುವ ಆಗ್ನೇಯ ವಿಭಾಗದ ಪೋಲಿಸರು. ಕೆಲವರಿಗೆ ನೋಟಿಸ್ ನೀಡಿದ್ದಾರೆ. ಸದ್ಯ ಮೂರು ಎಫ್​ಐಆರ್ ದಾಖಲಿಸಿರುವ ಪೋಲಿಸರು ವಿಚಾರಣೆ ನಡೆಸುತ್ತಿದ್ದು. ಚೀಪ್ ಸೂಪರ್ಡೆಂಟ್ ಹಾಗೂ ಸೂಪರ್ಡೆಂಟ್ ಅವರ ವಿಚಾರಣೆ ನಡೆಸಲು ಅನುಮತಿ ಕೋರಿ ಪತ್ರ ಬರೆದಿದ್ದು. ವಿಚಾರಣೆ ಮುಗಿದ ಕೂಡಲೆ ಚಾರ್ಜಶೀಟ್ ಸಲ್ಲಿಕೆ ಮಾಡಲು ಎಲ್ಲಾ ತಯಾರಿ ನಡೆಸಲಾಗಿದೆ.

 

RELATED ARTICLES

Related Articles

TRENDING ARTICLES