Thursday, September 12, 2024

ಬೆತ್ತಲೆ ಮಾಡಿ ಯುವಕನಿಗೆ ಇಂಜೆಕ್ಷನ್​ ಕೊಟ್ಟು ಲಿಂಗ ಪರಿವರ್ತನೆ!

ಬೆಂಗಳೂರು: ಟೀ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಯುವಕನ ಲಿಂಗ ಪರಿವರ್ತನೆ ಮಾಡಿ ಮಂಗಳಮುಖಿಯರು ಭಿಕ್ಷಾಟನೆಗೆ ಒತ್ತಾಯಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಾಲ್ವರು ಮಂಗಳಮುಖಿಯರು ಯುವಕನಿಗೆ ಬಲವಂತವಾಗಿ ಇಂಜೆಕ್ಷನ್ ಕೊಟ್ಟು ಗಂಡು ಹುಡುಗನನ್ನ ಲಿಂಗ ಪರಿವರ್ತನೆ ಮಾಡಿದ್ದಾರೆ. ಅಕ್ರಮವಾಗಿ ಲಿಂಗ ಪರಿವರ್ತನೆ ಮಾಡಿದ್ದಾರೆ, ಅಶ್ಲೀಲ ಪೋಟೊ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿದ್ದಲ್ಲದೆ ಮನಬಂದಂತೆ ಥಳಿಸಿ ಚಿತ್ರ ಹಿಂಸೆ ಕೊಟ್ಟಿದ್ದಾರೆ. ಗಂಡಸಾಗಿ ಭಿಕ್ಷಾಟನೆ ಮಾಡಿದ್ರೆ ದಿನಕ್ಕೆ ಒಂದು ಸಾವಿರ ಸಂಪಾದನೆ ಮಾಡ್ತಾರೆ. ಇನ್ನು ನೀನು ಹೆಣ್ಣಾಗಿ ಭಿಕ್ಷಾಟನೆ ಮಾಡಿದ್ರೆ ಇನ್ನೇಷ್ಟು ಮಾಡ್ತೀಯಾ ಅಂತ ಧಮ್ಕಿ ಹಾಕಿದ್ದಾರೆ.

ಫ್ರೇಜರ್ ಟೌನ್ ನಲ್ಲಿ ಈ ಘಟನೆ ನಡೆದಿದ್ದು, ಚಿತ್ರಾ, ಪ್ರೀತಿ, ಕಾಜಲ್, ಅಶ್ವಿನಿ,ಮುಗಿಲಿ ಎನ್ನುವ ಐದು ಮಂದಿ ವಿರುದ್ಧ ಕಸೀಪಾ ಅಲಿಯಾಸ್ ಮೊಹಮ್ಮದ್ ಅಬೂಬಕ್ಕರ್ ಸೇಠ್ ಎಂಬುವವರು ಪುಲಿಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: H.D. ಕುಮಾರಸ್ವಾಮಿ ಪ್ರಾಸಿಕ್ಯೂಷನ್​​ಗೆ ಅನುಮತಿ ಕೇಳಿದ SIT

ದೂರಿನಲ್ಲಿ ಏನಿದೆ?

RELATED ARTICLES

Related Articles

TRENDING ARTICLES