Thursday, September 12, 2024

“ಗೌರಿ” ಸಮರ ಶುರು, ಯುವ ಜೋಡಿಗೆ ಸೈ ಅಂದ್ರಾ ಪ್ರೇಕ್ಷಕರು!?: ಪವರ್​ ರಿವ್ಯೂ

ಫಿಲ್ಮಿಡೆಸ್ಕ್​: ಗೌರಿ ಸಿನಿಮಾ ಮೂಲಕ ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್​ನನ್ನ ಬೆಳ್ಳಿತೆರೆಗೆ ಲಾಂಚ್ ಮಾಡಿದ್ದಾರೆ. ಸಮರ್ಜಿತ್ ಜೊತೆಗೆ ಯುವನಟಿ ಸಾನ್ಯಾ ಅಯ್ಯರ್ ಕೂಡ ಬಿಗ್ ಸ್ಕ್ರೀನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾದ್ರೆ ಈ ಯುವ ಜೋಡಿಯ ಕಲರ್​ಫುಲ್ ಸಿನಿಮಾ  ‘ಗೌರಿ’ ಹೇಗೆ ಮೂಡಿಬಂದಿದೆ..?  ಗೌರಿ ಅಡ್ಡದಲ್ಲಿ ಏನೆಲ್ಲಾ ಇದೆ ಅನ್ನೋದ ಸಂಪೂರ್ಣ ವಿವರ ಇಲ್ಲಿದೆ.

ಚಿತ್ರ : ಗೌರಿ

ನಿರ್ದೇಶನ : ಇಂದ್ರಜಿತ್ ಲಂಕೇಶ್

ನಿರ್ಮಾಣ : ಲಾಫಿಂಗ್ ಬುದ್ಧ ಫಿಲಂಸ್

ಸಿನಿಮಾಟೋಗ್ರಫಿ : ಎ.ವಿ ಕೃಷ್ಣಕುಮಾರ್

ಸಂಗೀತ : ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಬೆರಗಿ, ಅನಿರುಧ್ ಶಾಸ್ತ್ರಿ

ತಾರಾಗಣ : ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಸಿಹಿ ಕಹಿ ಚಂದ್ರು, ಚಂದು ಗೌಡ ಮತ್ತು ಇತರರು.

ಇದನ್ನೂ ಓದಿ: ದರ್ಶನ್‌ಗಾಗಿ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ: ನಟ ಜಗ್ಗೇಶ್​

ಗೌರಿ ಸ್ಟೋರಿಲೈನ್ :

ಗೌರಿ ಸಿನಿಮಾದ ನಾಯಕನಿಗೆ ಹುಟ್ಟಿನಿಂದ ಶ್ರವಣ ಸಮಸ್ಯೆ ಇರುತ್ತೆ. ಆದ್ರೆ ಹಾಡು ಹೇಳುವ ಕಲೆ ಕೂಡ ಹುಟ್ಟಿನಿಂದಲೇ ಬಂದಿರುತ್ತೆ. ಇನ್ನೊಂದು ಕಡೆಗೆ ಕಥಾನಾಯಕಿ ಸಮಂತಾ ವಿಶೇಷ ಚೇತನ ಕಲಾವಿದರ ಮ್ಯೂಸಿಕ್ ಬ್ಯಾಂಡ್​ವೊಂದನ್ನ ಕಟ್ಟಬೇಕು ಅಂತ ಪ್ರಯತ್ನ ಪಡ್ತಾ ಇರ್ತಾಳೆ. ಈ ಇಬ್ಬರೂ ಆ್ಯಕ್ಸಿಡೆಂಟ್ ಆಗಿ ಒಬ್ಬರಿಗೊಬ್ರು ಮುಖಾಮುಖಿಯಾಗ್ತಾರೆ. ಮುಂದೆ ದೊಡ್ಡ ಶೋವೊಂದರಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಾಣ್ತಾರೆ. ಆದ್ರೆ ಈ ತಂಡ ಕಟ್ಟಿಕೊಂಡು ಇವರು ಪ್ರಶಸ್ತಿ ಗೆಲ್ತಾರಾ..? ಅಷ್ಟಕ್ಕೂ ಸಮಂತಾ ಈ ಬ್ಯಾಂಡ್ ಕಟ್ಟೋದಕ್ಕೆ ಹೊರಟಿದ್ದು ಯಾಕೆ..? ಈ ಎಲ್ಲದರ ಸುತ್ತ ಸಿನಿಮಾ ಕಥೆ ಸುತ್ತುತ್ತೆ.

ಗೌರಿ ಕಲಾವಿದರ ಪರ್ಫಾರ್ಮೆನ್ಸ್:

ಗೌರಿ ಸಿನಿಮಾ ಮೂಲಕ ಪರಿಚಿತರಾಗಿರೋ ಸಮರ್ಜಿತ್ ಮತ್ತು ಸಾನ್ಯಾ ಖಂಡಿತ ಕನ್ನಡ ಚಿತ್ರರಂಗಕ್ಕೆ ದೊರಕಿರೋ ಪ್ರತಿಭಾನ್ವಿತ ಯುವತಾರೆಯರು. ಇಬ್ಬರು ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಸಿಹಿಕಹಿ ಚಂದ್ರು, ಮಾನಸಿ ಸುಧೀರ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಗಿಲ್ಲಿನಟ, ನವಾಜ್ ಪುಟ್ಟ ಪಾತ್ರಗಳಲ್ಲಿ ನಗಿಸ್ತಾರೆ.

ಗೌರಿ ಪ್ಲಸ್ ಪಾಯಿಂಟ್ಸ್:

ಕಲರ್​ಫುಲ್ ಸಾಂಗ್ಸ್ – ಮೇಕಿಂಗ್

ಎ ವಿ ಕೃಷ್ಣಕುಮಾರ್ ಸಿನಿಮಾಟೋಗ್ರಫಿ

ಗೌರಿ ಫೈನಲ್ ಸ್ಟೇಟ್​​ಮೆಂಟ್:

ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಲರ್​ಫುಲ್ ಆಗಿ ಸಿನಿಮಾಗಳನ್ನ ಕಟ್ಟಿಕೊಡೋದ್ರಲ್ಲಿ ಪಂಟರ್. ಗೌರಿ ಸಿನಿಮಾವನ್ನ ಕೂಡ ಅಷ್ಟೇ ಸೊಗಸಾಗಿ ತೆರೆಗೆ ತಂದಿದ್ದಾರೆ. ಕಥೆ ಕೊಂಚ ಮೆಲೋಡ್ರಾಮಾ ಆಯ್ತು ಅನ್ನಿಸಿದ್ರೂ ಹಾಸ್ಯ ಸನ್ನಿವೇಶಗಳು, ಒಳ್ಳೆ ಹಾಡುಗಳ ಮೂಲಕ ಇಡೀ ಸಿನಿಮಾ ಚೆಂದದ ಅನುಭವ ಕೊಡುವಂತೆ ಮಾಡ್ತಾರೆ. ಖಂಡಿತ ಒಂದೊಮ್ಮೆ ಫ್ಯಾಮಿಲಿ ಸಮೇತ ನೋಡಿ ಎಂಜಾಯ್ ಮಾಡಬಹುದಾದ ಚಿತ್ರ ಗೌರಿ.

ಗೌರಿ ಚಿತ್ರಕ್ಕೆ ಪವರ್ ರೇಟಿಂಗ್:

5ಕ್ಕೆ 3 ***

RELATED ARTICLES

Related Articles

TRENDING ARTICLES