Sunday, October 6, 2024

ಡೆಂಘೀ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ: ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚಳವಾಗಿದ್ದು, ಆತಂಕ ಮನೆ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ 7362 ಡೆಂಘೀ ಕೇಸ್​ಗಳು ಪತ್ತೆಯಾಗಿವೆ. ಡೆಂಘೀ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಮಿಡಿಯುತ್ತಿದೆ ಶ್ರೀಕೃಷ್ಣನ ಹೃದಯ

ರಾಜ್ಯದಲ್ಲಿ ಡೆಂಘೀ ಸೋಂಕು ತಗುಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಸೊಳ್ಳೆ ಕಚ್ಚುವುದರಿಂದ ಜ್ವರ ಬರುತ್ತದೆ. ಒಬ್ಬರಿಂದ ಒಬ್ಬರಿಗೆ ಡೆಂಘೀ ಜ್ವರ ಬರಲ್ಲ ಎಂದು ಮಾಹಿತಿ ನೀಡಿದ್ದಾರೆ. ಸೊಳ್ಳೆಗಳ ಸಂಖ್ಯೆ ಹೆಚ್ಚಳವಾಗ್ತಿದ್ದು, ಅದರ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಾಗಿದೆ. ಸೊಳ್ಳೆ ಜಾಸ್ತಿ ಇರುವ ಕಡೆ ಫಾಗಿಂಗ್​ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಡೆಂಘೀ ರೋಗಿಗಳಿಗೆಂದು ಪ್ರತೀ ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ10 ಬೆಡ್​ಗಳನ್ನ ಮೀಸಲಿಡಬೇಕು. ಜಿಲ್ಲಾ‌ಮಟ್ಟದಲ್ಲಿ ಒಂದು ಟಾಸ್ಕ್​​ ಫೋರ್ಸ್​​ ರಚನೆ ಮಾಡಬೇಕು ಅಂತಾ ಸೂಚನೆ ನೀಡಲಾಗಿದೆ. ಡಿಸಿ, ಸಿಇಓ, ಡಿಹೆಚ್​​ಓ ನೇತೃತ್ವದ ಟಾಸ್ಕ್​ ಫೋರ್ಸ್​​​ ರಚಿಸಲಾಗಿದೆ. ಪ್ರತಿನಿತ್ಯ ಸಭೆ ಮಾಡಿ ಡೆಂಘೀ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದರು. ಸ್ಲಂ ನಿವಾಸಿಗಳಿಗೆ ಉಚಿತವಾಗಿ ಸೊಳ್ಳೆ ಪರದೆ ವಿತರಿಸಲು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES