Saturday, October 5, 2024

ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು- ಪ್ರಯಾಣಿಕರು ವಿಮಾನದಲ್ಲೇ ಲಾಕ್

ದೇವನಹಳ್ಳಿ; ಸ್ಪೈಸ್ ಜೆಟ್ ಏರ್‌ಲೈನ್ಸ್ ಸಿಬ್ಬಂದಿಯ ಎಡವಟ್ಟಿನಿಂದಾಗಿ ಟೇಕಾಫ್ ಆಗದ ವಿಮಾನದಲ್ಲೇ ಪ್ರಯಾಣಿಕರು ಲಾಕ್ ಆದ ಪ್ರಸಂಗ ನಡೆದಿದೆ.

ಫ್ಲೈಟ್​​ನಲ್ಲೇ 100ಕ್ಕೂ ಹೆಚ್ಚು ಪ್ರಯಾಣಿಕರು ಲಾಕ್ ಆಗಿದ್ದಾರೆ. ಹೀಗಾಗಿ ಪ್ರಯಾಣಿಕರು ಆತಂಕಗೊಂಡಿದ್ದು, ಹೈಜಾಕ್ ಮಾಡಿ ಕೂರಿಸಿದ್ದಾರೆಂದು ಆರೋಪಿಸಿದರು. ನಿನ್ನೆ ಸಂಜೆ 7 ಗಂಟೆಯಿಂದ ಪ್ರಯಾಣಿಕರು ಫ್ಲೈಟ್‍ನಲ್ಲೆ ಕುಳಿತಿದ್ದರು. ವಿಮಾನದಲ್ಲಿ ಊಟ, ನಿದ್ದೆ ಇಲ್ಲದೇ ಪ್ರಯಾಣಿಕರ ಪರದಾಟ ಅನುಭವಿಸಿದರು.

ಇದನ್ನು ಓದಿ; ಸಿಎಂ ಎದುರೇ ಆಪ್ತ ಮಹದೇವಪ್ಪಗೆ ಕಾಂಗ್ರೆಸ್​ ಶಾಸಕ ಕ್ಲಾಸ್!

SG8151 ಸ್ಪೈಸ್ ಜೆಟ್ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿತ್ತು. ಟರ್ಮಿನಲ್ 3ರಿಂದ ರಾತ್ರಿ 7.40ಕ್ಕೆ ಟೆಕಾಫ್ ಆಗಬೇಕಿತ್ತು. ಆದರೆ ವಿಮಾನ ಟೆಕಾಫ್ ಆಗದೇ ರನ್ ವೇನಲ್ಲೇ ನಿಲ್ಲಿಸಿಕೊಳ್ಳಲಾಗಿತ್ತು. ಇದಕ್ಕೆ ಸ್ಪೈಸ್ ಜೆಟ್ ಕಾರಣ ಕೂಡ ಕೊಡದೇ ಇರುವುದರಿಂದ ಪ್ರಯಾಣಿಕರು ವಿಮಾನದೊಳಗೆ ಕುಳಿತು ಪ್ರತಿಭಟನೆ ನಡೆಸಿದರು.

ಕೊನೆಗೂ ಇದೀಗ ವಿಮಾನ ಟೇಕಾಫ್‌ ಆಗಿದ್ದು, ವಿಮಾನ ಬೆಂಗಳೂರಿಗೆ ಬಂದಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನ ನಿಂತಿರುವುದಾಗಿ ಮಾಹಿತಿ ಲಭಿಸಿದೆ.

RELATED ARTICLES

Related Articles

TRENDING ARTICLES