Saturday, October 5, 2024

ಶ್ರೀಘ್ರದಲ್ಲೇ ರಸ್ತೆಗೆ ಇಳಿಯಲಿದೆ KSRTCಯ ಹೊಸ ವೋಲ್ವೋ ಬಸ್​

ಬೆಂಗಳೂರು: ಶ್ರೀಘ್ರದಲ್ಲೇ KSRTC ಹೊಸ ವೋಲ್ವೋ ಬಸ್​ ಅನ್ನ ರಸ್ತೆಗೆ ಇಳಿಸಲು ಸಿದ್ಧವಾಗಿದೆ.. ಇನ್ನು ಹೊಸ 9600 VOLVO ಸೀಟರ್ ಪ್ರೋಟೋಟೈಪ್ ಬಸ್ಸನ್ನು ಇಂದು ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಅವರು ಪರಿವೀಕ್ಷಣೆ ನಡೆಸಿದರು.

ಇದನ್ನ ಓದಿ;ಸ್ಪೈಸ್ ಜೆಟ್ ಏರ್‌ಲೈನ್ಸ್ ಎಡವಟ್ಟು-ಪ್ರಯಾಣಿಕರು ವಿಮಾನದಲ್ಲೇ ಲಾಕ್

ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ ಹೊಸ‌ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿರುವುದರಿಂದ ಕಣ್ ತಣಿಸುವ ಸೌಂದರ್ಯ. ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ನವೀನ ತಂತ್ರಜ್ಞಾನ ಹಾಗೂ ತಾಂತ್ರಿಕತೆಯಿಂದ ಸುಧಾರಿತ ಇಂಜಿನ್ ಹೊಂದಿದ್ದು ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಸುಧಾರಿತ ಇಂಜಿನ್‌ KMPL ನೀಡುತ್ತದೆ.

ಒಟ್ಟಾರೆ ಬಸ್ಸಿನ ಉದ್ದದಲ್ಲಿ ಶೇ3.5 ಹೆಚ್ಚಳ ಇರುವುದರಿಂದ ಸಲೂನ್‌ನಲ್ಲಿ ಪ್ರಯಾಣಿಕರ ಆಸನಗಳ ನಡುವಿನ ಅಂತರ ಹೆಚ್ಚಾಗಿದೆ. ಒಟ್ಟಾರೆ ಬಸ್ಸಿನ ಎತ್ತರದಲ್ಲಿ ಶೇ 5.6 ರಷ್ಟು ಹೆಚ್ಚಳ ಇರುವುದರಿಂದ ಹೆಚ್ಚಿನ ಹೆಡ್‌ ರೂಂ ಇರುತ್ತದೆ. ವಿಂಡ್‌ಶೀಲ್ಡ್ ಗಾಜು ಶೇ 9.5 ರಷ್ಟು ವಿಸ್ತಾರವಾಗಿದ್ದು, ಚಾಲಕನಿಗೆ ಗೋಚರತೆಯನ್ನು ಹೆಚ್ಚಿಸಿ ಬ್ಲೈಂಡ್ ಸ್ಪಾಟ್ ಅನ್ನು ಕಡಿಮೆ ಮಾಡುತ್ತದೆ. ವಿಶಾಲ ಲಗೇಜ್ ಸ್ಥಳಾವಕಾಶವಿದ್ದು ಶೇ 20% ರಷ್ಟು ಹೆಚ್ಚಿನ ಲಗ್ಗೇಜ್ ಇಡುವ ಸೌಲಭ್ಯವಿರುತ್ತದೆ ಎನ್ನಲಾಗಿದೆ..

ಇನ್ನು ಬಸ್ಸಿನ ಒಳಗೆ ಪ್ರಯಾಣಿಕರ ಆಸನದ ಎರಡೂ ಬದಿಯಲ್ಲಿ ನೀರಿನ ಪೈಪುಗಳಿದ್ದು 30 ನಾಜಲ್ ಗಳಿಂದ ನೀರು ಸರಬರಾಜು ಆಗಿ ಬೆಂಕಿ ಅವಘಡದ ಸಂದರ್ಭದಲ್ಲಿ ನೀರು ಸಿಂಪಡಿಸಲು ಪ್ರಾರಂಭವಾಗುತ್ತದೆ. ಚಾಲಕರು ಪಾದಚಾರಿಯನ್ನು ಪ್ರಯಾಣಿಕರ ಬಾಗಿಲಿನಿಂದ ಸುಲಭವಾಗಿ ನೋಡಬಹುದಾಗಿದ್ದು ಪಾದಾಚಾರಿಗಳಿಗೆ ಹೆಚ್ಚಿನ ಸುರಕ್ಷತೆ ಇರುತ್ತದೆ.

ಹೀಗಾಗಲೇ ಸಚಿವ ರಾಮಲಿಂಗಾರೆಡ್ಡಿ ಬಸ್ಸನ್ನು ವೀಕ್ಷಿಸಿ ಬಹುಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಅಷ್ಟೆ ಅಲ್ಲದೇ
ಶ್ರೀಘ್ರದಲ್ಲೇ ಹೊಸ ವೋಲ್ವೋ ಬಸ್​ ಅನ್ನ ರಸ್ತೆಗೆ ಇಳಿಸಲು ತಯಾರಿನಡೆಸಿದೆ ಎಂದು ತಿಳಿದುಬಂದಿದೆ..

RELATED ARTICLES

Related Articles

TRENDING ARTICLES