Saturday, October 5, 2024

ಬ್ರಿಟನ್ ಪುನರ್ ನಿರ್ಮಾಣ ಮಾಡಲು ಬದ್ಧ; ಕೀರ್ ಸ್ವಾರ್ಮರ್ ಭರವಸೆ

ಲಂಡನ್​​​: ಬ್ರಿಟನ್ ಅನ್ನ ಪುನರ್ ನಿರ್ಮಾಣ ಮಾಡಲು ನಾನು ಬದ್ಧ ಎಂದು ಪ್ರಧಾನಿ ಕೀರ್ ಸ್ವಾರ್ಮರ್ ಭರವಸೆ ನೀಡಿದ್ದಾರೆ.. ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಬಹುಮತ ಗಳಿಸಿದ್ದು, ಕೀರ್ ಸ್ಟಾರ್ಮರ್ ಅವರು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. 10 ಡೌನಿಂಗ್ ಸ್ಟ್ರೀಟ್‌ನ ಹೊರಗೆ ತಮ್ಮ ಮೊದಲ ಭಾಷಣ ಮಾಡಿದ ಅವರು, ಮತದಾನದ ಆದ್ಯತೆ ಲೆಕ್ಕಿಸದೆ ಎಲ್ಲಾ ನಾಗರಿಕರಿಗೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಜೊತೆಗೆ, ಕೂಡಲೇ ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸುವ ಮೂಲಕ ಬ್ರಿಟನ್ ಅನ್ನು ಪುನರ್ ನಿರ್ಮಾಣ ಮಾಡಲು ಬದ್ಧರಾಗಿದ್ದೇವೆ ಎಂದಿದ್ದಾರೆ..

ಇದನ್ನ ಓದಿ; ಹಾಸ್ಟೆಲ್​ ಊಟ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ನಾವು ನಮ್ಮ ದೇಶವನ್ನು ಮರು ನಿರ್ಮಾಣ ಮಾಡುವಾಗ ಮತದಾರರು ನಮ್ಮ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಗೆ ಅನುಗುಣವಾಗಿ ಜವಾಬ್ದಾರಿ ನಾವು ನಿರ್ವಹಿಸುತ್ತೇವೆ. ಮತದಾರರು ಲೇಬ‌ರ್ ಪಕ್ಷಕ್ಕೆ ಮತ ಹಾಕಿರಲಿ ಅಥವಾ ಹಾಕದಿದ್ದರೂ ಕೂಡ ನಮ್ಮ ಸರ್ಕಾರವು ನಿಮಗೆ ಸೇವೆ ಸಲ್ಲಿಸುತ್ತದೆ. ರಾಜಕೀಯವು ಶಕ್ತಿಯಾಗಿರಬಹುದು. ಆದರೆ, ನಾವು ಅದನ್ನು ದೇಶದ ಒಳಿತಿಗಾಗಿಯೇ ಬಳಸುತ್ತೇವೆ ಎಂದು ಕೀರ್ ಸ್ವಾರ್ಮರ್ ತಿಳಿಸಿದ್ದಾರೆ..

ದೇಶದ ಜನರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವಿದೆ ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಈ ಭಾವನೆಯನ್ನು ಬದಲಾಯಿಸುವುದರ ಜತೆಗೆ ದೇಶವನ್ನು ಪುನರ್‌ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರವು ದಣಿವರಿಯಿಲ್ಲದೆ ಕೆಲಸ ಮಾಡುತ್ತದೆ ಎಂದಿದ್ದಾರೆ.. ಇನ್ನು ಮುಂದುವರೆದಂತೆ ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ದೇಶದ ಮೊದಲ ಬ್ರಿಟಿಷ್- ಏಷ್ಯನ್ ಪ್ರಧಾನಿಯಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಶ್ರಮವನ್ನು ಯಾರೂ ಕಡಿಮೆ ಅಂದಾಜು ಮಾಡಬಾರದು. ಹಾಗಾಗಿ ನಾವು ಅವರನ್ನು ಗೌರವಿಸುವ ಮೂಲಕ ಸೇವೆಯನ್ನು ಸ್ಮರಿಸುತ್ತೇವೆ ಎಂದಿದ್ದಾರೆ.

RELATED ARTICLES

Related Articles

TRENDING ARTICLES