Monday, July 8, 2024

ನಟ ವಿನೋದ್ ರಾಜ್​ ಗೆ 57ನೇ ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು: ಹಿರಿಯ ನಟಿ ದಿ.ಲೀಲಾವತಿ ಅವರ ಪುತ್ರ ವಿನೋದ್​ ರಾಜ್ ಅವರಿಗೆ ಇಂದು 57ನೇ ಹುಟ್ಟುಹಬ್ಬದ ಸಂಭ್ರಮ, ಅಭಿಮಾನಿಗಳೊಂದಿಗೆ ಕೇಕ್​ ಕತ್ತರಿಸುವ ಮೂಲಕ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ನೆಲಮಂಗಲದ ಸೋಲದೇವನಹಳ್ಳಿಯಲ್ಲಿರುವ ನಟಿ ಲೀಲಾವತಿಯವರ ಮನೆಯಲ್ಲಿ ಇಂದು ನಟ ವಿನೋದ್​ ರಾಜ್ ಅವರು ತಮ್ಮ 57ನೇ ಹುಟ್ಟುಬ್ಬವನ್ನು ಆಚರಿಸಿಕೊಂಡಿದ್ದಾರೆ. ತಾಯಿ ಲೀಲಾವತಿಯವರು ಅಗಲಿದ ಬಳಿಕ ಇದೇ ಮೊದಲ ಬಾರಿಗೆ ತಾಯಿ ಅನುಪಸ್ಥಿತಿಯಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಅಭ್ಯರ್ಥಿ ನಾನೇ- ಸಿ.ಪಿ ಯೋಗೇಶ್ವರ್​

ಸೋಲದೇವನಹಳ್ಳಿ ಸುತ್ತಮುತ್ತಲಿನ ಹಳ್ಳಿ ಜನರು ಇಂದು ನಟ ವಿನೋದ್​ ರಾಜ್​ ಅವರ ನಿವಾಸಕ್ಕೆ ಆಗಮಿಸಿ ಜನ್ಮದಿನದ ಶುಭಾಷಯಗಳನ್ನು ಕೋರಿ ಕೇಕ್​ ಕಟ್​ ಮಾಡಿಸಿದರು. ಬಳಿಕ ಶಾಲು ಹೂಗುಚ್ಚ ನೀಡಿ ಅಭಿನಂದಿಸಿದರು. ಈ ವೇಳೆ ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES