Monday, July 8, 2024

ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗ ಕತ್ತರಿಸಿದ ವೈದ್ಯ!

ವೈದ್ಯನೊಬ್ಬನ ನಿರ್ಲಕ್ಷ್ಯಕ್ಕೆ ಶಿಶುವೊಂದು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ನಡೆದಿದೆ. ಮಹಿಳೆಗೆ ಸಿಸೇರಿಯನ್ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ವೈದ್ಯ ಕೊಯ್ದಿದ್ದಾನೆ. ಇದರ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.

ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್‌ ಡೆಲಿವರಿ ಆಗದ ಹಿನ್ನೆಲೆಯಲ್ಲಿ ಸಿಸೇರಿಯನ್ ಮಾಡಲು ವೈದ್ಯರು ಮುಂದಾಗಿದ್ದರು. ಅದರಂತೆ ಕಳೆದ ಜೂನ್ 27ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು.

ಇದನ್ನೂ ಓದಿ: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ ಬಹಿರಂಗ: ಹೆಚ್​ಡಿಕೆ ಗಂಭೀರ ಆರೋಪ

ಆದರೆ ಸಿಸೇರಿಯನ್‌ ಮಾಡುವಾಗ ವೈದ್ಯ ನಿಜಾಮುದ್ದೀನ್ ಮಗು ತೆಗೆಯುವಾಗ ಮರ್ಮಾಂಗವನ್ನೇ ಕೊಯ್ದಿದ್ದಾರೆ. ನಂತರ ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶುಕ್ರವಾರ ಮೃತಪಟ್ಟಿದೆ.

ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟಿಸಿ, ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES