Monday, July 8, 2024

ಮೊರಾರ್ಜಿ ಶಾಲೆಯಲ್ಲಿ ಮೇಷ್ಟ್ರಾದ ಸಿಎಂ

 

 

 

 

 

 

ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಕನ್ನಡ ವ್ಯಾಕರಣ ಪಾಠ ಮಾಡಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.

ಬಳಿಕ ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ? ಸಂಧಿ ಎಂದರೇನು? ಕನ್ನಡದಲ್ಲಿ ಎಷ್ಟು ಸಂಧಿಗಳಿವೆ ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದರು. ಪ್ರವರ್ಗ, ಅಲ್ಪ ಪ್ರಾಣ-ಮಹಾ ಪ್ರಾಣದ ಬಗ್ಗೆ ಮಕ್ಕಳಿಗೆ ಪಾಠ ಮಾಡಿದರು. ಅಲ್ಲದೇ ಸ್ವರ-ದೀರ್ಘ ಸ್ವರದ ಬಗ್ಗೆಯೂ ಮಕ್ಕಳಿಗೆ ಸಿಎಂ ಪಾಠ ಮಾಡಿದ್ದು, ವ್ಯಂಜನಾಕ್ಷರ ಅಂದರೇನು, ವರ್ಗೀಯ-ಅವರ್ಗೀಯ ವ್ಯಂಜಗಳಿವೆ ಎಂದು ತಿಳಿಸಿದರು.

ಇದನ್ನೂ ಓದಿ:ಕ್ರಿಕೆಟ್​ಗೆ ವಿದಾಯ ಘೋಷಿಸಿದ ಬೆನ್ನಲ್ಲೇ ಲಂಡನ್​ನಲ್ಲಿ ಶಾಶ್ವತ ನೆಲಸಲು ಕೋಹ್ಲಿ ತಯಾರಿ!

ಅಲ್ಪ ಪ್ರಾಣಕ್ಕೆ ಉದಾಹರಣೆ ಹೇಳಿ ಎಂದು ಸಿಎಂ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಉತ್ತರಿಸಿದರು. ಆದರೆ, ಉತ್ತರ ಅಸ್ಪಷ್ಟವಾಗಿದ್ದರಿಂದ ಸಿಎಂ, ವಿದ್ಯಾರ್ಥಿಗಳ ಹೇಳಿದ ಉತ್ತರವನ್ನು ತಿದ್ದಿದರು.

ಕರ್ನಾಟಕದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಆರಂಭಿಸಿದ್ದು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನೀವೇ ಎಂದು ವಿದ್ಯಾರ್ಥಿಗಳು ಉತ್ತರಿಸಿದರು. ಬಳಿಕ ಸಿಎಂ 1994-95ರಲ್ಲಿ ಮೊರಾರ್ಜಿ ದೇಸಾಯಿ ಆರಂಭಿಸಿದ್ದಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು. ಮಕ್ಕಳಿಗೆ ಬಸವಣ್ಣನವರ ಮಹತ್ವ ತಿಳಿಸಿದರು. ಮನುಷ್ಯರ ನಡುವಿನ ತಾರತಮ್ಯ, ಜಾತಿ ವ್ಯವಸ್ಥೆ ವಿರೋಧಿಸಿದ್ದರು. ಬಸವಣ್ಣ 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ನಡೆಸಿದ್ದರು ಎಂದು ಪಾಠ ಮಾಡಿದರು.

RELATED ARTICLES

Related Articles

TRENDING ARTICLES