Sunday, July 7, 2024

ರೀಲ್ಸ್ ಶೋಕಿದಾರನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ

ಬೆಂಗಳೂರು: ರೀಲ್ಸ್ ಮಾಡಿ ಫೇಮಸ್ ಆಗುವ ತವಕದಲ್ಲಿದ್ದ ಅರುಣ್ ಕಟಾರೆ ಇತ್ತೀಚೆಗೆ ಅರೆಸ್ಟ್ ಆಗಿದ್ದಾರೆ. ಸಾರ್ವಜನಿಕವಾಗಿ ರೀಲ್ಸ್ ಮಾಡಲು ಡಮ್ಮಿ ಗನ್ ಬಳಸಿ ಅವರು ಬೆಂಗಳೂರಿನ ಕೊತ್ತನೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಬೀದಿಬೀದಿಯಲ್ಲಿ ಗನ್‌ ಹಿಡಿದು ಓಡಾಡಿದ್ದನ್ನು ಕಂಡು ಜನ ಆತಂಕಕ್ಕೊಳಗಾಗಿದ್ದರು. ಈ ಕಾರಣದಿಂದಲೇ ಅರುಣ್ ಅರೆಸ್ಟ್ ಆಗಿದ್ದರು. ಈಗ ಅರುಣ್ ಮಾಡಿದ ತಪ್ಪಿನಿಂದ ಸ್ಯಾಂಡಲ್​ವುಡ್​ಗೆ ಸಂಕಷ್ಟ ಎದುರಾಗಿದೆ. ಕನ್ನಡದ ಹಿಟ್ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸುವ ತಂತ್ರಜ್ಞ ಸಾಹಿಲ್ ಅವರಿಗೆ ನೋಟಿಸ್ ಬಂದಿದೆ.

ಇದನ್ನೂ ಓದಿ: ದರ್ಶನ್‌ಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಹೊಂಬಾಳೆ ಫಿಲ್ಮ್ಸ್, ಗೀತಾ ಪಿಕ್ಚರ್ಸ್ ನಂತಹ ಬ್ಯಾನರ್​ಗಳ ಸಿನಿಮಾಗಳಿಗೆ ಸಾಹಿಲ್ ಅವರು ಡಮ್ಮಿ ಗನ್ ನೀಡುತ್ತಿದ್ದರು. ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ‘ಕಬ್ಜ’, ‘ಮಫ್ತಿ’ ಸಿನಿಮಾಗಳಲ್ಲಿ ಭರ್ಜರಿಯಾಗಿ ಗನ್ ಬಳಕೆ ಆಗಿತ್ತು. ಈ ಸಿನಿಮಾಗಳಿಗೆ ಡಮ್ಮಿ ಗನ್ ಒದಗಿಸಿದವರು ಸಾಹಿಲ್. ಅರುಣ್ ಮಾಡಿದ ತಪ್ಪಿನಿಂದ ಇವರಿಗೆ ನೋಟಿಸ್ ಹೋಗಿದೆ.

ಅರುಣ್ ಕಟಾರೆ ಅವರು ಡಮ್ಮಿ ಗನ್​ನ ಬಾಡಿಗೆ ಪಡೆದಿದ್ದು ಸಾಹಿಲ್​ನಿಂದ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡಲು ಅರುಣ್ ಕಟಾರೆ ಈ ಗನ್ ಬಳಕೆ ಮಾಡಿಕೊಂಡಿದ್ದರು. ಸಾಹಿಲ್ ಅವರಿಂದ ಸಾರ್ವಜನಿಕರಲ್ಲಿ ಆತಂಕ ಎದುರಾಗಿತ್ತು. ಹೀಗಾಗಿ ಅರುಣ್ ಅವರನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದರು. ಅರುಣ್ ಅವರ ವಿಚಾರಣೆ ಮಾಡಿದಾಗ ಡಮ್ಮಿ ಗನ್​ನ ಸಾಹಿಲ್​ನಿಂದ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಹೀಗಾಗಿ ಕೊತ್ತನೂರು ಪೊಲೀಸರಿಂದ ಸಾಹಿಲ್​ಗೆ ನೊಟೀಸ್ ನೀಡಲಾಗಿದೆ.

RELATED ARTICLES

Related Articles

TRENDING ARTICLES