Saturday, October 5, 2024

ವರಲಕ್ಷ್ಮಿ ಶರತ್‌ಕುಮಾರ್ ರಿಸಪ್ಷನ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!

ಚನ್ನೈ: ಬಹುಭಾಷಾ ನಟ ಶರತ್‌ಕುಮಾರ್ ಅವರ ಪುತ್ರಿ ಮತ್ತು ಕನ್ನಡದ ʻಮಾಣಿಕ್ಯʼ ಸಿನಿಮಾದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ನಟಿ ವರಲಕ್ಷ್ಮಿ ಶರತ್‌ಕುಮಾರ್ ಮುಂಬೈ ಮೂಲದ ಉದ್ಯಮಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದ್ಯಮಿ ನಿಕೊಲಾಯ್ ಸಚ್‌ದೇವ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಈ ಮದುವೆ ಸಮಾರಂಭಕ್ಕೆ ಥಾಯ್ಲೆಂಡ್‌ನಲ್ಲಿ ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರು ಮಾತ್ರ ಭಾಗವಹಿಸಿದ್ದರು.

ನಿನ್ನೆ ಚೆನ್ನೈನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಆರತಕ್ಷತೆಗೆ ಕಿಚ್ಚು ಸುದೀಪ್ ಕೂಡ ಭಾಗವಹಿಸಿದ್ದರು. ಪತ್ನಿ ಪ್ರಿಯಾ ಹಾಗೂ ಪುತ್ರಿ ಸಾನ್ವಿ ಕೂಡ ಜೊತೆಗೆ ಇದ್ದರು. ಚೆನ್ನೈನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ತಮಿಳು, ತೆಲುಗು, ಕನ್ನಡ ಚಿತ್ರರಂಗದ ಗಣ್ಯರೇ ಹೆಚ್ಚಾಗಿ ಭಾಗಿವಹಿಸಿದ್ದರು. ನಿರ್ದೇಶಕ ಬಾಲಾ, ನಟ ಜೀವಾ, ನಟಿ ರೋಜಾ, ನಿರ್ದೇಶಕ ಆರ್.ಕೆ.ಸೆಲ್ವಮಣಿ, ನಿರ್ದೇಶಕ ಹರಿ, ನಟ ವಿಜಯಕುಮಾರ್, ನಟ ಬಾಲಕೃಷ್ಣ, ನಟಿ ಆಂಡ್ರಿಯಾ, ನಿರ್ದೇಶಕ ಕೆ.ಎಸ್.ರವಿಕುಮಾರ್, ನಟ ಶಿವಕುಮಾರ್, ಶೋಭಾ, ಸುಂದರ್ ಸಿ. ಖುಷ್ಬೂ, ನಿರ್ದೇಶಕ ಎ.ಎಲ್.ವಿಜಯ್, ಮಣಿರತ್ನಂ, ಸುಹಾಸಿನಿ, ಜಾಕಿ ಶ್ರಾಫ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಬಂದು ಶುಭ ಕೋರಿದ್ದಾರೆ.

ಇದನ್ನೂ ಓದಿ: ಡೈವರ್ಸ್​ ಕೇಸ್​ ವಿಚಾರಣೆಗೆ ಗೈರು: ಅಮೆರಿಕಕ್ಕೆ ಮರಳಿದ ನಟ ಯುವ ಪತ್ನಿ ಶ್ರೀದೇವಿ ಭೈರಪ್ಪ

ಆರತಕ್ಷತೆಯಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಮೆರೂನ್ ಬಣ್ಣದ ಗೌನ್ ಧರಿಸಿದ್ದರೆ, ನಿಕೊಲಾಯ್ ಸಚ್‌ದೇವ್ ಅದೇ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದರು. ನಟ ಶರತ್‌ಕುಮಾರ್ ಅವರ ಮೊದಲ ಪತ್ನಿ ಸಯಾ ಅವರಿಗೆ ಜನಿಸಿದವರೇ ವರಲಕ್ಷ್ಮಿ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ನಟಿ ರಾಧಿಕಾರನ್ನು ವಿವಾಹವಾಗಿದ್ದರು.

ಮೊದಲಿಂದ ಶರತ್‌ ಕುಮಾರ್‌ ಅವರು ಸುದೀಪ್ ಹಾಗೂ ಅವರ ಕುಟುಂಬಕ್ಕೆ ಆತ್ಮೀಯರು. ವರಲಕ್ಷ್ಮೀ ಶರತ್ ಕುಮಾರ್ ಅವರು ಸುದೀಪ್‌ ಅವರ ಜನುಮದಿನ ವಿಶ್‌ ಮಾಡದೇ ಇರಲ್ಲ. ಇಬ್ಬರೂ ತುಂಬ ಆತ್ಮೀಯರು.

RELATED ARTICLES

Related Articles

TRENDING ARTICLES