Sunday, July 7, 2024

ಜಾರ್ಖಂಡ್​ ಮುಖ್ಯಮಂತ್ರಿಯಾಗಿ 3ನೇ ಬಾರಿಗೆ ಹೇಮಂತ್ ಸೊರೇನ್ ಪದಗ್ರಹಣ

ರಾಂಚಿ: ಐದು ತಿಂಗಳ ಜೈಲುವಾಸ ಅನುಭವಿಸಿ ಬಿಡುಗಡೆಯಾದ ಬಳಿಕ ಮತ್ತೆ ಜಾರ್ಖಂಡ್​ ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೇನ್​ ಅವರು ಇಂದು ಪ್ರಮಾಣ ಸ್ವೀಕರಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ  ಅಧಿಕಾರಿಗಳಿಂದ ಬಂಧಿತರಾಗಿ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್ ಅವರು ಮೂರನೇ ಬಾರಿಗೆ ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಹೇಮಂತ್‌ ಸೊರೆನ್‌ ಅವರ ಬಂಧನವಾದ ಬಳಿಕ ಅವರ ಆಪ್ತ ಚಂಪೈ ಸೊರೆನ್‌ ಅವರು ಫೆಬ್ರವರಿ 2ರಂದು ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಲಾಲು ಪ್ರಸಾದ್‌ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಆಡಳಿತಾರೂಢ ಮೈತ್ರಿಕೂಟವು ಹೇಮಂತ್‌ ಸೊರೆನ್‌ ಅವರು ಮತ್ತೆ ಸಿಎಂ ಆಗಲು ಒಪ್ಪಿಗೆ ಸೂಚಿಸಿತು. ಇದಾದ ಬಳಿಕ ಚಂಪೈ ಸೊರೆನ್‌ ರಾಜೀನಾಮೆ ನೀಡಿದ್ದರು. ಹೇಮಂತ್‌ ಸೊರೆನ್‌ ಅವರು ಸರ್ಕಾರ ರಚಿಸಲು ಹಕ್ಕು ಮಂಡಿಸಿ, ಈಗ ಸಿಎಂ ಆಗಿ ಪದಗ್ರಹಣ ಮಾಡಿದ್ದಾರೆ.

RELATED ARTICLES

Related Articles

TRENDING ARTICLES