Friday, July 5, 2024

ದರ್ಶನ್​ ಖೈದಿ ನಂಬರ್​ ಬಳಸಿ ಮಗುವಿನ ಫೋಟೋ ಶೂಟ್: ಮಕ್ಕಳ ಆಯೋಗದಿಂದ ದೂರು ದಾಖಲು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರ ಖೈದಿ ನಂಬರಿನಲ್ಲಿ ಮಗುವಿನ ಪೊಟೋ ಶೂಟ್‌ ಮಾಡಿಸಿದರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬಿಸಿ ಮುಟ್ಟಿಸಲು ಮುಂದಾಗಿದೆ.

ನಟ ದರ್ಶನ್​ ನೀಡಲಾದ ಖೈದಿ ಸಂಖ್ಯೆಯನ್ನು ಹಾಕಿ ಮಗುವಿನ ಫೋಟೋಶೂಟ್​ ಮಾಡಿರುವುದನ್ನು ಮಕ್ಕಳ ಆಯೋಗವು ಗಂಭೀರವಾಗಿ ಪರಿಗಣಿಸಿದ್ದು ಈ ವಿಚಾರ ಸಂಬಂಧ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ. ಈಗ ಪೊಲೀಸ್‌ ಇಲಾಖೆಯ ಮೂಲಕ ಪೋಷಕರ ಪತ್ತೆ ಕಾರ್ಯಕ್ಕೆ ಮುಂದಾಗಿದೆ.

ಇದನ್ನೂ ಓದಿ: ಮಗನನ್ನೇ ಕೈದಿ ಮಾಡಿದ ದರ್ಶನ್​ ಹುಚ್ಚು ಫ್ಯಾನ್!

ಈ ಕುರಿತು ಆಯೋಗದ ಸದಸ್ಯ ಶಶಿಧರ್ ಕೊಸಂಬೆ ಪ್ರತಿಕ್ರಿಯಿಸಿ, ಈ ರೀತಿ ಫೋಟೋ ಶೂಟ್‌ ಮಾಡಿಸಿರುವುದು ನಿಜಕ್ಕೂ ಖಂಡನೀಯ. ಹೀಗಾಗಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಈ ಬಗ್ಗೆ ಇವತ್ತು ಪೊಲೀಸ್ ಇಲಾಖೆ ಐಟಿ ಸೆಲ್ ಪತ್ರ ಬರೆಯಲಾಗುತ್ತದೆ. ಪೋಟೋ ಶೂಟ್ ಮಾಡಿಸಿದವರ ಪತ್ತೆ ಮಾಡಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಫೋಟೋ ಶೂಟ್‌ ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ಇದು ಬಾಲ ನ್ಯಾಯ ಕಾಯ್ದೆಯ ಸ್ಪಷ್ಟ ಉಲ್ಲಂಘನೆ. ಕಾನೂನಿನಡಿ ಯಾವೆಲ್ಲ ಕ್ರಮಗಳಿಗೆ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಕೈಗೊಳ್ಳುತ್ತೇವೆ ಎಂದರು.

RELATED ARTICLES

Related Articles

TRENDING ARTICLES