Thursday, July 4, 2024

ಪೋಷಕರಿಲ್ಲದೆ ಹೊಳೆ ದಾಟುವುದು ಅಸಾಧ್ಯ, ಬೈಂದೂರಿನಲ್ಲಿ ಮಕ್ಕಳು ಶಾಲೆ ತಲುಪುವುದೇ ಸಾಹಸ!

ಉಡುಪಿ: ಮಳೆ ಬಂದರೆ ಸಾಕು, ಬೈಂದೂರಿನ ಮಕ್ಕಳಿಗೆ ಶಾಲೆಗೆ ಹೋಗುವುದೇ ಸಮಸ್ಯೆ ಆಗಿ ಬಿಡುತ್ತದೆ. ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗಿ ಬಿಡಲು ಹರಸಾಹಸವನ್ನೇ ಮಾಡಬೇಕಾಗಿ ಬರುತ್ತದೆ. ಸದ್ಯ ಉಡುಪಿಯ ವಿಡಿಯೋ ಒಂದು ವೈರಲ್ ಆಗಿದ್ದು ಅದರಲ್ಲಿ ಪೋಷಕರು ಯಾವ ರೀತಿ ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ವಿಧಿಯ ಜೊತೆ ಹೊಡೆದಾಡುತ್ತಿದ್ದಾರೆ ಎಂಬುವುದು ಬಯಲಾಗಿದೆ.

ಕಳೆದ ವಾರ ರೆಡ್ ಅಲರ್ಟ್ ಇದ್ದಾಗಲೂ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿರಲಿಲ್ಲ. ನೆರೆಯ ದಕ್ಷಿಣ ಕನ್ನಡಕ್ಕೆ ರಜೆ ನೀಡಲಾಗಿತ್ತು. 2 ದಿನ ರೆಡ್ ಅಲರ್ಟ್ ಹಿನ್ನೆಲೆ ರಜೆ ಘೋಷಿಸಲಾಗಿತ್ತು. ಆದರೆ, ಉಡುಪಿ ಜಿಲ್ಲೆಗೆ ಒಂದು ದಿನವೂ ರಜೆ ನೀಡಿರಲಿಲ್ಲ. ಹೀಗಾಗಿ ಬೈಂದೂರಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಲುಪಿಸಲು ಜೋರಾಗಿ ಹರಿಯುವ ಹೊಳೆ ದಾಟುವಂತಹ ಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ: ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 27 ಮಂದಿ ಸಾವು, ಹಲವರಿಗೆ ಗಾಯ

ಗೋಳಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲ್ಕಡಕೆಯಲ್ಲಿ ಹೆಚ್ಚಾಗಿ ಮರಾಠ ಜನಾಂಗ ವಾಸವಾಗಿದ್ದಾರೆ. ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಂತಿದೆ ಈ ಗ್ರಾಮ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಯಾವ ರಿಸ್ಕ್ ಬೇಕಾದ್ರು ತೆಗೆದುಕೊಳ್ಳಬೇಕಿದೆ. ಆದರೆ ಕೊಂಚ ಯಾವಾರಿದರೂ ಅನಾವುತ ಕಟ್ಟಿಟ್ಟಬುತ್ತಿ.

RELATED ARTICLES

Related Articles

TRENDING ARTICLES