Thursday, July 4, 2024

ಖೈದಿ‌ ನಂ 6106ನಲ್ಲಿ ಮೂಡಿ ಬಂದ ದರ್ಶನ್ ಫೋಟೋ

ಬೆಂಗಳೂರು: ಖೈದಿ‌ ನಂಬರ್ 6106 ಬಳಸಿ ದರ್ಶನ್ ಭಾವಚಿತ್ರವನ್ನ ರಚಿಸಲಾಗಿದೆ. ಸದ್ಯ ದರ್ಶನ್​​ ಅಭಿಮಾನಿಗಳಿಗೆ ಈ ನಂಬರ್​​ ತುಂಬಾ ಫೇಮಸ್​​ ಆಗಿದೆ. ಇನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ಖೈದಿ‌ ನಂಬರ್ 6106 ಬಳಸಿಕೊಂಡು ನಟ ದರ್ಶನ್ ಫೋಟೋವನ್ನ ಬಿಡಿಸಿದ್ದಾನೆ. ​​​​

ಇನ್ನು ದರ್ಶನ್​​​ಗೆ ಈ ನಂಬರ್​​​​ ಕೊಟ್ಟಗಿನಿಂದ ಹಿಡಿದು ಈವರೆಗೂ ಅಭಿಮಾನಿಗಳ ಗಾಡಿಗಳಲ್ಲಿ ದರ್ಶನ್ ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್ ಹೆಚ್ಚಾಗಿತ್ತು, ಈ ಬೆನ್ನಲ್ಲೇ ಮತ್ತೆ ಇದೇ ನಂಬರ್​​​ ಬಳಸಿ ಅಭಿಮಾನಿಯೊರ್ವ ದರ್ಶನ್​​ ಫೋಟೋ ಬಿಡಿಸಿದ್ದಾನೆ.

ಇದನ್ನೂ ಓದಿ: ಮಗನನ್ನೇ ಕೈದಿ ಮಾಡಿದ ದರ್ಶನ್​ ಹುಚ್ಚು ಫ್ಯಾನ್!

ಇನ್ನು ನಮ್ಮ ಬಾಸ್​​ಗೆ ಕೊಡುವ ಪ್ರಮೋಶನ್ ನೋಡಿ ಬರುವ ಎಲ್ಲ ಮೂವಿಗಳು ಸೂಪರ್ ಹಿಟ್ ಆಗಬೇಕು ಎನ್ನುತ್ತಿರುವ ಅಭಿಮಾನಿಗಳು. ಇನ್ನು, ಈ ಪೋಸ್ಟರ್​​​​​​​ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದ್ದು,
ಇದು ನಮ್ಮ ಬಾಸ್ ಹವಾ ಅಂತ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​​ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

RELATED ARTICLES

Related Articles

TRENDING ARTICLES