Thursday, July 4, 2024

ಬ್ಯಾಡ್ಮಿಂಟನ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು  ಸಾವನ್ನಪ್ಪಿದ 17 ವರ್ಷದ ಶಟ್ಲರ್‌

ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯೊಂದರಲ್ಲಿ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಸಂಭಿಸಿದೆ.

ಆಟಗಾರ ಬ್ಯಾಡ್ಮಿಂಟನ್​ ಕೋರ್ಟ್​ನಲ್ಲಿಯೇ ಬಿದ್ದು ನರಳಾಟ ಮಾಡಿದ ವಿಡಿಯೊ ವೈರಲ್​ ಆಗಿದೆ. 17 ವರ್ಷದ ಚೀನ ಆಟಗಾರ ಝಾಂಕ್‌ ಝಿಜಿಯೆ ಸಾವನ್ನಪ್ಪಿದ ಆಟಗಾರ. ಜಪಾನ್‌ ಕಸುಮ ಕವಾನೊ ವಿರುದ್ಧ ಝಿಜಿಯೆ ವಿರುದ್ಧ ಆಡುತ್ತಿದ್ದ ಝಾಂಕ್‌ ಝಿಜಿಯೆ ಮೊದಲ ಗೇಮ್​ನಲ್ಲಿ 1-1 ಅಂಕಗಳಿಸಿದ್ದರು. ಸರ್ವ್​ ಮಾಡಿದ ತಕ್ಷಣ ಝಾಂಕ್‌ ಝಿಜಿಯೆ ಕೋರ್ಟ್​ನಲ್ಲಿಯೇ ಕುಸಿದು ಬಿದ್ದರು.

ಇದನ್ನೂ ಓದಿ: ಹತ್ರಾಸ್‌ನಲ್ಲಿ ಕಾಲ್ತುಳಿತಕ್ಕೆ 27 ಮಂದಿ ಸಾವು, ಹಲವರಿಗೆ ಗಾಯ

ಅವರನ್ನು ಬದುಕಿಸುವ ಪ್ರಯತ್ನ ನಡೆಯಿತಾದರೂ ಅದು ಫ‌ಲ ನೀಡಲಿಲ್ಲ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES